ಕನಕಗಿರಿ ಬಿಜೆಪಿ ಮಂಡಲ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಿಸಲಾಯಿತು. ಪ್ರಮುಖರಾದ ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ರವಿ ಭಜಂತ್ರಿ, ಹನುಮೇಶ ಯಲಬುರ್ಗಿ, ಗ್ಯಾನಪ್ಪ ಚಿಕ್ಕಖೇಡ ಇತರರಿದ್ದರು. 
ಕೊಪ್ಪಳ

ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ನಾಯಕ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಮಂಡಲ ಬಿಜೆಪಿ ಅಧ್ಯಕ್ಷ ಸಣ್ಣ ಕನಕಪ್ಪ ಹೇಳಿಕೆ
  • ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆ
ಕನಕಗಿರಿ: ರಾಜಕೀಯದಲ್ಲಿ ಅಜಾತ ಶತ್ರುವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರತಿ ಗ್ರಾಮಗಳಿಗೂ ರಸ್ತೆ ನಿರ್ಮಿಸಿ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಸಣ್ಣ ಕನಕಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ವಿಪಕ್ಷ ನಾಯಕರಾಗಿದ್ದಾಗಲೂ ವಾಜಪೇಯಿ ಅವರು ಉತ್ತಮ ಸಂಸದೀಯ ಪಟುವಾಗಿ ಕಾರ್ಯನಿರ್ವಹಿಸಿದರು. ಪ್ರಧಾನಿಯಾದಾಗಲೂ ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಇಂತಹ ಧೀಮಂತ ನಾಯಕನ ಆಡಳಿತಕ್ಕೆ ವಿಪಕ್ಷಗಳೇ ಬೆರಗಾಗಿದ್ದವು. ವಾಜಪೇಯಿ ಅವರು ಉತ್ತಮ ಆಡಳಿತಗಾರರಾಗಿ ಅಜಾತಶತ್ರು ಬಿರುದು ಪಡೆದುಕೊಂಡಿದ್ದಾರೆ ಎಂದರು.
ಪಪಂ ಸದಸ್ಯರಾದ ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ, ಪ್ರಮುಖರಾದ ಗುರುನಗೌಡ ಹುಲಿಹೈದರ, ಲಿಂಗಪ್ಪ ಪೂಜಾರ, ಅರುಣ್ ಭೂಸನೂರುಮಠ ಇತರರಿದ್ದರು.