ಕುಷ್ಟಗಿಯ ಎಸ್‌ವಿಸಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಶೂನ್ಯ ನೆರಳು ದಿನ ಆಚರಿಸಲಾಯಿತು. ಉಪನ್ಯಾಸಕ ಸಿದ್ದೇಶ್, ಶಿಕ್ಷಕಿಯರಾದ ಕರುಣಾ ಶಿಂತ್ರಿ, ಸಂತೋಷ್ ಇದ್ದರು. 
ಕೊಪ್ಪಳ

ಖಗೋಳ ವಿದ್ಯಮಾನ ವರ್ಷಕ್ಕೆರಡೇ ಸಲ

ಕುರುವತ್ತಿ ಶ್ರೀಕಾಂತಪ್ಪ
ಕುಷ್ಟಗಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಎಸ್‌ವಿಸಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಶೂನ್ಯ ನೆರಳು ದಿನ ಆಚರಿಸಲಾಯಿತು.
ಉಪನ್ಯಾಸಕ ಸಿದ್ದೇಶ್ ಮಾತನಾಡಿ, ಸಮಭಾಜಕ ವೃತ್ತದಲ್ಲಿ ಸೂರ್ಯನ ಕಿರಣಗಳು ವರ್ಷದ ಎರಡು ದಿನಗಳಲ್ಲಿ ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುವ ಸಂದರ್ಭದಲ್ಲಿ ಖಗೋಳ ಕ್ಷೇತ್ರದಲ್ಲಿ ಶೂನ್ಯ ನೆರಳು ದಿನ ಸಂಭವಿಸುತ್ತದೆ. ಮಧ್ಯಾಹ್ನ ಸಮಯದಲ್ಲಿ ಸೂರ್ಯನು ನೇರವಾಗಿ ನೆತ್ತಿಯ ಮೇಲೆ ಬಂದು, ಲಂಬವಾದ ವಸ್ತುಗಳ ನೆರಳು ಕೆಲ ಕ್ಷಣಗಳ ಕಾಲ ಅದೃಶ್ಯವಾಗುತ್ತದೆ. ಈ ಖಗೋಳ ವಿದ್ಯಮಾನ ವರ್ಷಕ್ಕೆ ಎರಡು ಸಲ ಸಂಭವಿಸುತ್ತದೆ. ಭೂಮಿಯು ಸ್ವಲ್ಪ ಮಟ್ಟಿಗೆ ವಾಲಿದ ಅಕ್ಷ ರೇಖೆಯನ್ನು ಹೊಂದಿದೆ ಎಂದು ಹೇಳಿದರು.
ಶಿಕ್ಷಕಿಯರಾದ ಕರುಣಾ ಶಿಂತ್ರಿ, ಸಂತೋಷ್, ವೀರಣ್ಣ ಶಿಂತ್ರಿ, ಪೂಜಾ ಹಿರೇಮಠ ಹಾಗೂ ವಿದ್ಯಾರ್ಥಿಗಳು ಇದ್ದರು.