ಕನಕಗಿರಿ ತಾಲೂಕಿನ ಬೆನಕನಾಳದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. 
ಕೊಪ್ಪಳ

ಗಂಗೆ ಇದ್ದರಷ್ಟೇ ಬೆಳೆ ಸಮೃದ್ಧಿ

ಕನಕಗಿರಿ: ಸಕಲ ಜೀವಿಗಳಿಗೆ ನೀರು ಅವಶ್ಯಕ. ಅಂಥ ಗಂಗಾ ಪರಮೇಶ್ವರಿಯನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಮೈನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಬೆನಕನಾಳ ಗ್ರಾಮದಲ್ಲಿ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಮಿ ಮೇಲಿನ ಪ್ರತಿ ಜೀವಿಯು ನೀರಿನಿಂದಲೇ ಬದುಕಿದೆ. ಅದಕ್ಕಾಗಿ ಮಳೆಯನ್ನೇ ಆಶ್ರಯಿಸಿದ್ದೇವೆ. ಗಂಗೆ ಎಂದು ಪೂಜಿಸುತ್ತೇವೆ.
 ನೀರಿದ್ದರೆ ಮಾತ್ರ ಬೆಳೆ ಸಮೃದ್ಧಿ. ಆ ಪವಿತ್ರ ನೀರು ಹಾಳಾಗದಂತೆ ಸ್ವಚ್ಛವಾಗಿಡುವ ಕೆಲಸವನ್ನು ಎಲ್ಲರೂ ಮಾಡಬೇಕು. ನೀರು ದೊರೆಯಬೇಕೆಂದರೆ ನಮ್ಮ ಸುತ್ತಲೂ ಗಿಡಮರಗಳನ್ನು ಬೆಳೆಸಿ ಮಳೆಯ ಮೂಲಕವೇ ಪಡೆಯಬೇಕು ಎಂದರು. ಭಕ್ತರಿಗೆ ಬರವಿಲ್ಲ. ಆದರೆ, ಪರಿಶುದ್ಧ ಭಕ್ತಿಯಿಂದ ದೇವರನ್ನು ಪೂಜಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಎರಡು ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ಬೂದಗುಂಪಾದ ಸಿದ್ಧೇಶ್ವರ ಶ್ರೀಗಳು, ಲೇಬಗೇರಿಯ ವಿಶ್ವಕರ್ಮ ಸಮಾಜದ ಲಕ್ಷ್ಮೇಂದ್ರ ಶ್ರೀಗಳು, ಸೂಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ, ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ ಗೌಡ, ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಟಿ.ಜೆ ರಾಜಶೇಖರ, ಪ್ರಮುಖರಾದ ಕೃಷ್ಣ ವದ್ದಿಗೇರಿ, ವಿರುಪನಗೌಡ, ಮಲ್ಲಯ್ಯಸ್ವಾಮಿ, ಶಿವಾನಂದ ವಂಕಲಕುಂಟಿ, ವೀರೇಶ ವಂಕಲಕುಂಟಿ, ಹರೀಶ ಪೂಜಾರ, ಶಿವಪ್ಪ ಕುಂಡೇರ, ಕನಕಪ್ಪ ಇತರರಿದ್ದರು.