ಕನಕಗಿರಿ ಪಿಐ ವಿ. ನಾರಾಯಣರಿಗೆ ಎಸ್‌ಎ್ಐ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೆ, ಕೃಷಿ ಕೂಲಿಕಾರ ಮುಖಂಡರಾದ ಹುಸೇನಪ್ಪ, ರಮೇಶ ಡಂಕನಕಲ್, ಹನುಮೇಶ ದೇವರಾಜ, ಯಂಕಪ್ಪ ಇತರರಿದ್ದರು.
- ಕಾರ್ಯಕರ್ತರಿಂದ
- ಮನವಿ
- ಸಲ್ಲಿಕೆ
ಕನಕಗಿರಿ: ತಾಲೂಕಿನ ಗ್ರಾಮವೊಂದರ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೆ, ಬೇರೆ ಯುವತಿ ಜತೆ ಮದುವೆಯಾಗಿರುವ ಶಿಕ್ಷಕ ಬಸವರಾಜ ಕಟ್ಟಿಮನಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಎಸ್‌ಎ್ಐ ಕಾರ್ಯಕರ್ತರು ಶನಿವಾರ ಪಿಐ ವಿ. ನಾರಾಯಣ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ತಾಲೂಕಿನ ಗ್ರಾಮವೊಂದರ ಯುವತಿ ಕೊಪ್ಪಳದ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಬಸವರಾಜ ಕಟ್ಟಿಮನಿ ತನ್ನ ಸಂಬಂಧಿಯಾದ ಯುವತಿಯನ್ನು ಪರಿಚಯಿಸಿಕೊಂಡು ಸಲುಗೆಯಿಂದ ಇದ್ದು, ಮದುವೆಯಾಗುವುದಾಗಿ ನಂಬಿಸಿ ಒತ್ತಾಯ ಪೂರ್ವಕವಾಗಿ ಹಲವಾರು ಬಾರಿ ದೌರ್ಜನ್ಯ ಎಸಗಿದ್ದಾನೆ. ಯುವತಿ ಮದುವೆಯಾಗುಲು ಒತ್ತಾಯಿಸಿದಾಗ ನಿರಾಕರಿಸಿದ್ದಾನೆ.
ಆಗ ಹಿರಿಯರು ಮತ್ತು ಸಂಬಂಧಿಕರು ಬುದ್ಧಿವಾದ ಹೇಳಿ ನಿಶ್ಚಿತಾರ್ಥ ಮಾಡಿದ್ದಾರೆ. ಆರೋಪಿ ಮದುವೆ ಮುಂದಕ್ಕೆ ಹಾಕುತ್ತಾ ಬೇರೆ ಯುವತಿ ಜತೆ ಮದುವೆ ಆಗಿದ್ದಾನೆ. ವಂಚನೆಗೆ ಒಳಗಾದ ಯುವತಿಗೆ ಮತ್ತು ಯುವತಿ ಕುಟುಂಬಕ್ಕೆ ಬೆದರಿಕೆ ಹಾಕಿ ಯುವತಿಯೊಡನೆ ಮಾತನಾಡಿದ ಆಡಿಯೋವನ್ನು ಹರಿಬಿಟ್ಟು, ಮಾನ ಹರಾಜು ಮಾಡುವುದಾಗಿ ಹೆದರಿಸಿದಾನೆ. ಬಸವರಾಜ ಹಾಗೂ ಕೃತ್ಯಕ್ಕೆ ಸಹಕರಿಸಿದವರನ್ನು ಕೂಡಲೇ ಬಂಧಿಸಿ ಸಂತ್ರಸ್ಥೆಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.