ಅಳವಂಡಿ ಸಮೀಪದ ಬೈರಾಪುರದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. 
ಕೊಪ್ಪಳ

ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಬೈರಾಪುರ ಗ್ರಾಮಸ್ಥರ ಆಕ್ರೋಶ
ಅಳವಂಡಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಚಾರಕ್ಕೆ ಸಾರಿಗೆ ಬಸ್‌ಗಳೇ ಜೀವನಾಡಿ. ಆದರೆ, ಸರಿಯಾದ ಸಮಯಕ್ಕೆ ಬಸ್ ಬರದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಏನಾಗಬೇಕು ಎಂದು ಸಮೀಪದ ಬೈರಾಪುರ ಗ್ರಾಮಸ್ಥರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಳವಂಡಿಗೆ ತೆರಳುತ್ತಾರೆ. ಶಾಲೆಗೆ ತೆರಳಲು ಒಂದೇ ಬಸ್ ಇದ್ದು, ಅದು ತಡವಾಗಿ ಬಂದರೆ ವಿದ್ಯಾರ್ಥಿಗಳು ಹಾಜರಾತಿಗೆ ಅಡ್ಡಿಯಾಗುತ್ತಿದೆ. ಪ್ರತಿದಿನ ಬೆಳಗಿನ ತರಗತಿಗಳು ತಪ್ಪುತ್ತಿದ್ದು, ಓದಿಗೆ ತೊಂದರೆಯಾಗುತ್ತಿದೆ. ಕೆಲ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಾರೆ.
ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬಸಯ್ಯ ಶಶಿ, ದೇವಪ್ಪ ಹಾದಿಮನಿ, ರಮೇಶ ಕರಡಿ, ಶಂಕ್ರಪ್ಪ, ಪಂಪಯ್ಯ, ಮುದಿಯಪ್ಪ, ಮಹದೇವಪ್ಪ, ಪರಸಪ್ಪ ಪೂಜಾರ, ಬುಡ್ನೇಸಾಬ್ ಇತರರಿದ್ದರು.