ಕೊಪ್ಪಳ : ದಲಿತರು ದೇಶದ ಪ್ರಜೆಗಳಲ್ಲವಾ ? ಆರ್ಎಸ್ಎಸ್ ಬಗ್ಗೆ ಪ್ರಿಯಾಂಕ್ ರ್ಖಗೆ ಯಾಕೆ ಪ್ರಶ್ನಿಸಬಾರದು ಎಂದು ಶಾಸಕ ಶಿವರಾಜ ತಂಗಡಗಿ ಪ್ರಶ್ನಿಸಿದರು.
ಕಾರಟಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ ಜಿಗಜಿಣಗಿ ಇನ್ನೂ 1947ರ ಕಾಲದಲ್ಲಿರಬೇಕು. ಅದಕ್ಕೆ ದಲಿತರಿಗೆ ಯಾಕೆ ಸಂದ ಚಿಂತೆ ಎಂದು ಕೇಳುತ್ತಿದ್ದಾರೆ. ಆ ಜಗತ್ತಿನಿಂದ ಬೇಗ ಹೊರಬನ್ನಿ. ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ. ದೇಶಭಕ್ತರು ಎಂದು ಕರೆದುಕೊಳ್ಳುವ ಸಂ ಪರಿವಾರದವರು ರ್ಖಗೆ ಪ್ರಶ್ನೆಗೆ ಉತ್ತರ ಕೊಟ್ಟರೆ ತಪ್ಪೇನಿದೆ ? ಸಣ್ಣ ಕಿರಾಣಿ ಅಂಗಡಿ ನಡೆಸಲು ಜಿಎಸ್ಟಿ ಬೇಕು. ದೊಡ್ಡ ಕಚೇರಿ, ಸಂಚಾಲಕರು, ಭದ್ರತೆ ಎಲ್ಲವೂ ಇದ್ದು ದೇಶಕ್ಕೆ ಲೆಕ್ಕ ತೋರಿಸಲು ಯಾಕೆ ಹೆದರಿಕೆ ? ಈ ವಿಷಯದಲ್ಲಿ ರ್ಖಗೆಗೆ ನಮ್ಮ ಬೆಂಬಲ ಎಂದರು.
ಕೇಂದ್ರ ಸರ್ಕಾರ ಸಾಮಾನ್ಯ ಜನರ ದಾಖಲೆ ಕೆದಕಲು ಎಸ್ಐಆರ್ ಮಾಡುತ್ತಿದೆ. ಆರ್ಎಸ್ಎಸ್ ನೋಂದಣಿ ಯಾಕೆ ಮಾಡುತ್ತಿಲ್ಲ. ನಾವು ಅವರ ಕಚೇರಿಗೆ ಬರಲು ಸಿದ್ಧ. ಅಲ್ಲಿ ನಡೆಯುವ ಚಟುವಟಿಕೆ ಗೊತ್ತಾಗಬೇಕು. ದುಡ್ಡು ಎಲ್ಲಿಂದ ಬರುತ್ತದೆಂದು ತಿಳಿಸಿ. ದೇಶಕ್ಕಾಗಿ ತ್ಯಾಗ ಮಾಡಿದ ಆರ್ಎಸ್ಎಸ್ನ 10 ಜನರ ಹೆಸರು ಹೇಳಲಿ. ಕಾಂಗ್ರೆಸ್ನಲ್ಲಿ ನೂರಾರು ಜನರು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಇಂದಿರಾಗಾಂಧಿ, ರಾಜೀವ್ಗಾಂಧಿ ಜೀವ್ ತ್ಯಾಗ ಮಾಡಿದ್ದಾರೆ. ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸದವರು ದೇಶಭಕ್ತರಾಗುವುದಿಲ್ಲ. ಈವರೆಗೆ ಮತಚೋರಿ ಮಾಡಿದ್ದಾರೆ. ಈಗ ಸೀಟ್ ಚೋರಿ ಮಾಡುತ್ತಿದ್ದಾರೆಂದು ಕುಟುಕಿದರು.