shivaraj tangadagi 
ಕೊಪ್ಪಳ

ಬಿಜೆಪಿಯಲ್ಲಿ ದೊಡ್ಡ-ಗುಡ್ಡ ನುಂಗಿದ ಭ್ರಷ್ಠರಿಲ್ಲವೇ ?

ಪ್ರಮುಖ ಮುಖ್ಯಾಂಶಗಳು

  • ಸಚಿವ ತಂಗಡಗಿ ಬಿಜೆಪಿಯನ್ನು ಪ್ರಶ್ನಿಸಿದರು

ಕೊಪ್ಪಳ : ಬಿಜೆಪಿಯವರು ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ ಮಾಡುತ್ತಿದೆ. ಮೊದಲು ತಮ್ಮ ಪಕ್ಷದ ನಾಯಕರ ವಿರುದ್ಧದ ಆರೋಪಗಳತ್ತ ಗಮನಹರಿಸಲಿ. ತಾವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂಬ ಮನೋಭಾವ ಬಿಜೆಪಿಯವರದ್ದು. ಸ್ನೆಹಿತ ಜನಾರ್ದನ ರೆಡ್ಡಿ ದೊಡ್ಡ ಗುಡ್ಡವನ್ನೆ ನುಂಗಿ ಭ್ರಷ್ಟಚಾರ ಮಾಡಿದ ಆರೋಪಗಳಿದ್ದಾಗ ಭ್ರಷ್ಠಾಚಾರ ಕಾಣಿಸಲಿಲ್ಲವೇ? ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಮುನಿರಾಬಾದ್​ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜವಾಹರಲಾಲ್​ ನೆಹರು ಭ್ರಷ್ಟಾಚಾರ ಆರಂಭಿಸಿದರು ಎಂಬ ಹೇಳಿಕೆ ನೀಡುತ್ತಿರುವ ಶ್ರೀರಾಮುಲುಗೆ ನೆಹರು ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಜೆಪಿಯವರೆಲ್ಲರೂ ಸಾಚಾನಾ? ಅವರು ಮೇಲಿಂದ ಬಂದವರೇ? ಎಂದರು.
ಖಾತೆ ಹಂಚಿಕೆ ವಿಳಂಬದ ಬಗ್ಗೆ ನಮ್ಮ ಗಮನಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್​ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಬಹುಶ@ ಇಂದು ಖಾತೆ ಹಂಚಿಕೆಯಾಗಬಹುದು ಎಂಬ ನಿರೀಕ್ಷೆ ಇದೆ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿಯೂ ಖಾತೆ ಹಂಚಿಕೆಯಾಗಲು ಸುಮಾರು 15 ದಿನ ವಿಳಂಬವಾಗಿತ್ತು. ಆಗ ನಾನು ಸಚಿವರಾಗಿದ್ದೆ. ಬಿಜೆಪಿ ಆಡಳಿತದಲ್ಲಿಯೂ ಖಾತೆ ಹಂಚಿಕೆ ವಿಳಂಬವಾಗಿರುವ ಉದಾಹರಣೆಗಳಿವೆ. ಮಲ್ಲಿಕಾರ್ಜುನ ರ್ಖಗೆ ಅವರನ್ನು ಭೇಟಿಯಾಗಿ, ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ, ಅವರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.
ಸಚಿವರ ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿ, ಅದನ್ನು ನಾನು ನಿರ್ಧರಿಸುವುದಿಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್​ ಚರ್ಚಿಸಿ ತೀಮಾರ್ನಿಸಲಿದ್ದಾರೆ. ನನಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
===