ಕವಲೂರು ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಚಿತ್ರಕಲಾ ಪ್ರದರ್ಶನ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಪೂಜಾರ, ಮುಖ್ಯಶಿಕ್ಷಕ ಜಿ.ಎಸ್.ಗೌಡರ, ಶಿಕ್ಷಕರಾದ ವೀರಯ್ಯ ಒಂಟಿಗೋಡಮಠ, ತೋಟಪ್ಪ ಮಟ್ಟಿ ಇತರರಿದ್ದರು. 
ಕೊಪ್ಪಳ

ವಿದ್ಯಾರ್ಥಿಗಳಲ್ಲಿ ಗುರಿ ಸ್ಪಷ್ಟವಾಗಿರಲಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಜಿ.ಎಸ್.ಗೌಡರ ಸಲಹೆ
  • ವಾರ್ಷಿಕ ಚಿತ್ರಕಲಾ ಪ್ರದರ್ಶನ
ಕವಲೂರು: ವಿದ್ಯಾರ್ಥಿಗಳಿಗೆ ಓದಿನ ಜತೆ ಚಿತ್ರಕಲೆ, ಕ್ರೀಡೆ, ಸಂಗೀತ, ಅಭಿನಯ ಮುಂತಾದ ಕ್ಷೇತ್ರಗಳಿದ್ದು, ಆಸಕ್ತಿದಾಯಕ ವಿಷಯದಲ್ಲಿ ಅಭ್ಯಾಸ ಮಾಡಿ ಜೀವನದ ಗುರಿ ತಲುಪಿ ಎಂದು ಮುಖ್ಯಶಿಕ್ಷಕ ಜಿ.ಎಸ್.ಗೌಡರ ಹೇಳಿದರು.
ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸಕ್ತಿದಾಯಕ ವಿಷಯ ಆಯ್ಕೆ ಮಾಡಿಕೊಂಡರೆ ಸಾಧಿಸಲು ಹಾಗೂ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಗುರಿ ಸ್ಪಷ್ಟವಾಗಿರಲಿ ಎಂದರು. ಚಿತ್ರಕಲಾ ಪ್ರದರ್ಶನ ನಡೆಯಿತು. ಮಕ್ಕಳು ರಚಿಸಿದ ಉತ್ತಮ ಚಿತ್ರಕಲೆಗೆ ಪ್ರಶಸ್ತಿ ನೀಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಪೂಜಾರ, ಶಿಕ್ಷಕರಾದ ವೀರಯ್ಯ ಒಂಟಿಗೋಡಮಠ, ತೋಟಪ್ಪ ಮಟ್ಟಿ, ಮಮತಾ ಕೊಡಬಾಳ, ರಾಜಪ್ಪ, ನಾಗರಾಜ ಶೆಟ್ಟರ, ಮಲ್ಲಪ್ಪ, ವೀರಯ್ಯ, ಪ್ರಭು ಸುಂಕಣ್ಣವರ, ದೇವಪ್ಪ, ಸುಶಿಲಮ್ಮ, ಬಸಮ್ಮ, ಪ್ರಮುಖರಾದ ಮಲ್ಲೇಶ ಬಂಡಿ, ನಜಿರ ಸಾಬ್, ರಣದಪ್ಪ, ಮಲ್ಲಿಕಾರ್ಜುನ, ಶಿವಲೀಲಾ ಇತರರಿದ್ದರು.