ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಬೆಟ್ಟದ ದೇವಾಲಯದಲ್ಲಿನ ಹುಂಡಿ ಹಣ ಎಣಿಸುತ್ತಿರುವ ಕಂದಾಯ ಸಿಬ್ಬಂದಿ. ಶಿರಸ್ತೇದಾರರಾದ ಪ್ರಕಾಶ ನಾಯ್ಕ, ರವಿಕುಮಾರ ನಾಯಕ್ವಾಡಿ, ಸುನೀಲ್‌ಕುಮಾರ ಇತರರಿದ್ದರು. 
ಕೊಪ್ಪಳ

ಅಂಜನಾದ್ರಿ ಹುಂಡೀಲಿ 68.85ಲಕ್ಷ ರೂ. ಸಂಗ್ರಹ

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ದೇವಾಲಯದಲ್ಲಿನ ಹುಂಡಿ ತೆರೆಯಲಾಗಿದ್ದು, 68.85ಲಕ್ಷ ರೂ. ಸಂಗ್ರಹವಾಗಿದೆ.
ಕಂದಾಯ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ತೆರೆಯಲಾಗಿದ್ದು, ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಹಣ ಎಣಿಸಲಾಯಿತು. ನ.25ರಿಂದ ೆ.3ರವರೆಗೆ ಒಟ್ಟು 68,85,965.00 ರೂ. ಸಂಗ್ರಹವಾಗಿದೆ.
ಕಂದಾಯ ಇಲಾಖೆ ಶಿರಸ್ತೇದಾರ್ ಪ್ರಕಾಶ ನಾಯ್ಕ ಮಾತನಾಡಿ, ಭಕ್ತರು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಗಿದ್ದು, ಪಿಕೆಜಿ ಬ್ಯಾಂಕ್‌ಗೆ ಜಮೆ ಮಾಡಲಾಗಿದೆ ಎಂದರು.
ಶಿರಸ್ತೇದಾರರಾದ ಸುನೀಲಕುಮಾರ, ರವಿಕುಮಾರ ನಾಯಕ್ವಾಡಿ, ಸಿಬ್ಬಂದಿ ಮಂಜುನಾಥ ಹಿರೇಮಠ, ಪ್ರಭುಸ್ವಾಮಿ, ಶೇಖರಪ್ಪ, ಮೊಹಮ್ಮದ್ ರಫೀಕ್, ಶ್ರೀರಾಮ ಜೋಶಿ, ಗಾಯಿತ್ರಿ, ಕವಿತಾ, ಸುಪ್ರಿಯಾ, ಚನ್ನಪ್ಪ, ಮಂಜುನಾಥ್ ದುಮ್ಮಡಿ, ಪೂಜಾ, ದೇವಾಲಯ ವ್ಯವಸ್ಥಾಪಕ ವೆಂಕಟೇಶ ಸೇರಿ ಮಹಿಳಾ ಸ್ವಯಂ ಸೇವಾ ಸಂಘದವರಿದ್ದರು. ಕಳೆದ ಬಾರಿ ಹುಂಡಿ ತೆರೆದಿದ್ದಾಗ 21.96ಲಕ್ಷ ರೂ. ಸಂಗ್ರಹವಾಗಿತ್ತು.