ಕುಷ್ಟಗಿ ತಾಲೂಕಿನ ಯಲಬುರ್ತಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತ ಕೋರಲಾಯಿತು. ಕೇಂದ್ರದ ಕಾರ್ಯಕರ್ತೆ-ಸಹಾಯಕಿ ಇದ್ದರು.
- ಗುಲಾಬಿ ಹೂ ನೀಡಿ ಸ್ವಾಗತ ಕೋರಿದ ಅಂಗನವಾಡಿ ಕಾರ್ಯಕರ್ತೆಯರು
ಕುಷ್ಟಗಿ: ತಾಲೂಕಿನ ನಾನಾ ಗ್ರಾಮಗಳಲ್ಲಿ ಸೋಮವಾರ ಅಂಗನವಾಡಿ ಕೇಂದ್ರಗಳು ಬೇಸಿಗೆ ರಜೆ ಬಳಿಕ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಆಗಮಿಸಿದ ಮಕ್ಕಳಿಗೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ನಿಗದಿತ ಸಮಯಕ್ಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಆವರಣದಲ್ಲಿ ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ನಂತರ ಮುದ್ದು ಮಕ್ಕಳಿಗೆ ಸಿಹಿ ವಿತರಿಸಲಾಯಿತು. ತಾಲೂಕಿನ ಕಂದಕೂರು, ನಾಗರಾಳ, ತಾವರಗೇರಾ, ಮೆಣೇದಾಳ, ಮುದೇನೂರು, ನಿಲೋಗಲ್, ತುಗ್ಗಲಡೋಣಿ, ಕ್ಯಾದಗುಪ್ಪಿ, ನೆರಬೆಂಚಿ, ಮುದ್ದಲಗುಂದಿ, ಕಿಲ್ಲಾರಹಟ್ಟಿ, ಹಿರೇಮನ್ನಾಪೂರು, ಗುಮಗೇರಾ, ಶಿರಗುಂಪಿ, ಗಂಗನಾಳ, ಹಂಚಿನಾಳ ಸೇರಿದಂತೆ ಇತರ ಗ್ರಾಮಗಳ ಅಂಗನವಾಡಿಗಳು ಕಾರ್ಯನಿರ್ವಹಿಸಿದ ದೃಶ್ಯ ಕಂಡುಬಂದಿತು.