ಗಂಗಾವತಿ ಕೇಂದ್ರ ಹಿರಿಯ ಪ್ರಾಥಮಿಕ (ಸಿಪಿಎಸ್)ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಸಂಸ್ಥೆ ಜಿಲ್ಲಾ ಮುಖ್ಯಆಯುಕ್ತ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ, ಸಂಸ್ಥೆ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಚೌಕಿಮಠ, ಗೈಡ್ಸ್ ಆಯುಕ್ತೆ ಅರುಣಾ ವಸದ್ ಇತರರಿದ್ದರು.
- ಮುಖ್ಯಆಯುಕ್ತ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಹೇಳಿಕೆ
- ಕಾರ್ಗಿಲ್ ವಿಜಯ ದಿವಸ್ ಆಚರಣೆ
ಗಂಗಾವತಿ: ಗಡಿ ಕಾಯುವ ಸೈನಿಕರನ್ನು ನಿತ್ಯ ಸ್ಮರಿಸಬೇಕಿದ್ದು, ಕಾರ್ಗಿಲ್ ವಿಜಯ ಅವಿಸ್ಮರಣೀಯ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯಆಯುಕ್ತ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಹೇಳಿದರು.
ಕೇಂದ್ರ ಹಿರಿಯ ಪ್ರಾಥಮಿಕ (ಸಿಪಿಎಸ್)ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೈನಿಕ ಬಸವಂತಪ್ಪ ಅವರನ್ನು ಸನ್ಮಾನಿಸಲಾಯಿತು. ರಾಜ್ಯಪಾಲರ ಪುರಸ್ಕಾರಕ್ಕಾಗಿ ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ಪೂರ್ವಭಾವಿ ಪರೀಕ್ಷೆ ಆಯೋಜಿಸಲಾಗಿತ್ತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ, ಸಂಸ್ಥೆ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಚೌಕಿಮಠ, ಗೈಡ್ಸ್ ಆಯುಕ್ತೆ ಅರುಣಾ ವಸದ್, ತಾಲೂಕು ಪ್ರಧಾನ ಕಾರ್ಯದರ್ಶಿ ಹುಸೇನ್‌ಸಾಬ್ ಮಕಾನಾಂದರ್, ತರಬೇತುದಾರರಾದ ಸರೋಜಾ, ಯರ‌್ರೆಣ್ಣ, ಬಸವರಾಜ್, ಕಾಜಲ್, ಕವಿತಾ, ಶ್ರೀದೇವಿ ತಟ್ಟಿ, ಶೋಭಾ, ಶ್ರೀನಿವಾಸ ಇತರರಿದ್ದರು.