ಕೊಪ್ಪಳ ಪ್ರವಾಸಿ ಮಂದಿರದ ಎದುರುಗಡೆ ೆ.12 ಕ್ಕೆ ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕರಪತ್ರವನ್ನು ಸೋಮವಾರ ಬೀಡುಗಡೆ ಮಾಡಲಾಯಿತು. ಹನುಮೇಶ ಕಲ್ಮಂಗಿ, ಶರಣು ಗಡ್ಡಿ, ಬಸವರಾಜ್​ ಸಿಲುವಂತರ್​, ಸುಂಕಪ್ಪ ಗದಗ್​, ತುಕಾರಾಂ ಪಾತ್ರೋಟಿ, ಮಹದೇವಪ್ಪ, ಕೆ. ಬಿ. ಗೋನಾಳ್​, ಸಂಜಯ್​ ದಾಸ್​, ದೊರೆ ವಿಜಯ್​, ರಾಮಲಿಂಗ ಸ್ವಾಮಿ, ಮಲ್ಲಪ್ಪ ಇದ್ದರು. 
ಕೊಪ್ಪಳ

ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಫೆ . 12ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಕರಪತ್ರ ಬಿಡುಗಡೆ, ಹೋರಾಟಕ್ಕೆ ಅಧಿಕೃತ ಚಾಲನೆ
ಕೊಪ್ಪಳ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಫೆ. 12ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗಾಗಿ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮುಷ್ಕರದ ಕುರಿತಾದ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಹೋರಾಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರವು ರೈಲ್ವೆ, ಬಂದರು, ಕಲ್ಲಿದ್ದಲು ಗಣಿ, ತೈಲ ಮತ್ತು ರಕ್ಷಣಾ ಉತ್ಪಾದನೆಯಂತಹ ಪ್ರಮುಖ ಕ್ಷೇತ್ರಗಳನ್ನು ವಿದೇಶಿ ಮತ್ತು ದೇಶೀಯ ಕಾರ್ಪೊರೇಟ್​ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಉದ್ಯೋಗ ಭದ್ರತೆ ನಾಶವಾಗುತ್ತಿದ್ದು, ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಸಾರ್ವಜನಿಕ ಸೇವೆಗಳ ದರ ಏರಿಕೆಯಾಗಿ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಈ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬ್ಯಾಂಕ್​, ವಿಮೆ, ಸಾರಿಗೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಧ್ಯಾಹ್ನ ಬೋಜನ ಸಿಬ್ಬಂದಿಗಳು, ರೈತ ಸಂಘಟನೆಗಳು, ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಸ್ಥರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮುಷ್ಕರದ ಯಶಸ್ವಿಗಾಗಿ ಕೆ.ಎಸ್​.ಆರ್​.ಟಿ.ಸಿ ಅಧಿಕಾರಿಗಳು, ವರ್ತಕರ ಸಂಘ, ಟೈಲರ್​ ಯೂನಿಯನ್​, ಅಮಾಲರ ಸಂಘ ಹಾಗೂ ಕಟಿಂಗ್​ ಶಾಪ್​ ಮಾಲೀಕರಿಗೆ ಸ್ವಯಂಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬೆಂಬಲ ನೀಡಲು ಸಮಿತಿ ವತಿಯಿಂದ ಮನವಿ ಮಾಡಿದರು.
ಹನುಮೇಶ ಕಲ್ಮಂಗಿ, ಶರಣು ಗಡ್ಡಿ, ಬಸವರಾಜ್​ ಸಿಲುವಂತರ್​, ಸುಂಕಪ್ಪ ಗದಗ್​, ತುಕಾರಾಂ ಪಾತ್ರೋಟಿ, ಮಹದೇವಪ್ಪ, ಕೆ. ಬಿ. ಗೋನಾಳ್​, ಸಂಜಯ್​ ದಾಸ್​, ದೊರೆ ವಿಜಯ್​, ರಾಮಲಿಂಗ ಸ್ವಾಮಿ, ಮಲ್ಲಪ್ಪ ಇತರರಿದ್ದರು.