ಕೊಪ್ಪಳ ತಾಲೂಕಿನ ಲಿಂಗದಳ್ಳಿ ವಸತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಲ್ಬೆಂಡಾಜೋಲ್​ ಮಾತ್ರೆ ವಿತರಣೆ ಕಾರ್ಯಕ್ರಮವನ್ನು ಡಿಎಚ್​ಒ ಡಾ.ಟಿ.ಲಿಂಗರಾಜು ಉದ್ಘಾಟಿಸಿದರು. ಡಾ.ಪ್ರಕಾಶ ವಿ., ಡಾ.ರಾಮಾಂಜನೇಯ, ಡಾ.ಕರಿಯಮ್ಮ, ಉಪ ಪ್ರಾಚಾರ್ಯ ಪ್ರಮೋದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಇದ್ದರು.  
ಕೊಪ್ಪಳ

ಎಲ್ಲ ಮಕ್ಕಳು ಜಂತು ನಿವಾರಕ ಮಾತ್ರೆ ಸೇವಿಸಿ

ಪ್ರಮುಖ ಮುಖ್ಯಾಂಶಗಳು

  • ಡಿಎಚ್​ಒ ಡಾ.ಟಿ.ಲಿಂಗರಾಜು ಸಲಹೆ
ಕೊಪ್ಪಳ : ಒಂದರಿಂದ ಹತ್ತೊಂಬತ್ತು ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್​ ಮಾತ್ರೆ ಸೇವಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ಹೇಳಿದರು.
ತಾಲೂಕಿನ ಲಿಂಗದಳ್ಳಿ ಗ್ರಾಮದ ಡಾ.ಎ.ಪಿ.ಜೆ.ಅಬ್ದುಲ್​ ಕಲಾಂ ವಸತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆಯಲ್ಲಿ ಮಾತನಾಡಿದರು.
ಎಲ್ಲ ಮಕ್ಕಳಿಗೆ ಮಾತ್ರೆ ಉಚಿತವಾಗಿ ನೀಡುತ್ತೇವೆ. ಗುಳಿಗೆ ಸೇವನೆಯಿಂದ ರಕ್ತಹಿನತೆ ನಿಯಂತ್ರಣದಲ್ಲಿರಲಿದೆ. ಪೌಷ್ಠಿಕಾಂಶ ಹೀರುವಿಕೆ ಕಡಿಮೆಯಾಗುವುದು. ಮಕ್ಕಳಲ್ಲಿ ಏಕಾಗ್ರತೆ, ಕಲಿಕಾ ಸಾಮರ್ಥ್ಯ ಹೆಚ್ಚಿ ಅಂಗನವಾಡಿ, ಶಾಲೆಯಲ್ಲಿ ಹಾಜರಾತಿ ಹೆಚ್ಚಲಿದೆ. ಜಂತುಹುಳು ಕಡಿಮೆ ಮಾಡುವ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗಿದೆ. ಮಕ್ಕಳು ಕಡ್ಡಾಯವಾಗಿ ಸೇವಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ. ಮಾತನಾಡಿ, ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ. ಊಟ ಮಾಡುವ ಮೊದಲು, ಶೌಚಕ್ಕೆ ಹೋಗಿ ಬಂದ ನಂತರ ಸೋಪು ಬಳಸಿ ಕೈ ತೊಳೆಯಿರಿ. ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ಸಾಗಿಸಿ ಎಂದು ತಿಳಿಸಿದರು.
ಶಾಲೆ ಪ್ರಾಚಾರ್ಯ ದ್ಯಾಮಣ್ಣ ಮಾತನಾಡಿ, ಮಕ್ಕಳಲ್ಲಿ ರಕ್ತಹಿನತೆ ತಡೆಗೆ ಮಾತ್ರೆ ಸೇವನೆ ಅವಶ್ಯ. ಜಂತುರಹಿತ ಮಕ್ಕಳು ದೇಶದ ಸಂಪತ್ತು. ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಡಾ.ರಾಮಾಂಜನೇಯ, ಡಾ.ಕರಿಯಮ್ಮ, ಉಪ ಪ್ರಾಚಾರ್ಯ ಪ್ರಮೋದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಹಿ.ಆ.ಪ್ರಾ.ಆ. ಸುರಕ್ಷಾಧಿಕಾರಿ ವಂದನಾ, ತಾಲೂಕಾ ಆಶಾ ಮೇಲ್ವಿಚಾರಕಿ ಸಂಧ್ಯಾ, ಆರ್​.ಕೆ.ಎಸ್​.ಕೆ ಜಿಲ್ಲಾ ಸಂಯೋಜಕ ಮೆಹಬೂಬ್​, ವಸತಿ ನಿಲಯದ ವಾರ್ಡನ್​ ನಾಗರಾಜ ಇತರರಿದ್ದರು.
===
"

ವರ್ಷದಲ್ಲಿ ಎರಡು ಬಾರಿ ಮಾತ್ರೆ ವಿತರಿಸಲಾಗುತ್ತದೆ. ಶಾಲೆ, ಕಾಲೇಜು, ವಸತಿಶಾಲೆ, ಬಾಲಮಂದಿರ ಹಾಗೂ ಅಂಗನವಾಡಿ ಕೇಂದ್ರಗಳ ಅರ್ಹ ಮಕ್ಕಳು ಮಾತ್ರೆ ಸೇವನೆಯಿಂದ ವಂಚಿತರಾಗಬಾರದು. 19 ವರ್ಷದೊಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಸೇವಿಸಿ.