ಜಿಪಂ ಗ್ರಾಮೀಣ ಕುಡಿವ ನೀರು ವಿಭಾಗದ ಜೀಪನ್ನು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಂಗಾವತಿ ಕಚೇರಿಯಲ್ಲಿ ಮಂಗಳವಾರ ಜಪ್ತಿ ಮಾಡಲಾಯಿತು. ವಕೀಲರಾದ ಪಿ.ವಿ.ಪಾಟೀಲ್, ಹೊನ್ನೂರಪ್ಪ ಬೆನ್ನೂರು ಇತರರಿದ್ದರು. 
ಕೊಪ್ಪಳ

ಕೋರ್ಟ್ ಆದೇಶ ಎಇಇ ಜೀಪು ಜಪ್ತಿ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ಬಹುಗ್ರಾಮ ಕುಡಿವ ನೀರಿನ ಯೋಜನೆ ಅನುಷ್ಠಾನಕ್ಕೆ ಖರೀದಿಸಿದ್ದ ಭೂ ಮಾಲೀಕರಿಗೆ ಹೆಚ್ಚಿನ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದ ಜಿಪಂ ಗ್ರಾಮೀಣ ಕುಡಿವ ನೀರು ವಿಭಾಗದ ಗಂಗಾವತಿ ಕಚೇರಿಯಲ್ಲಿದ್ದ ಜೀಪನ್ನು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಗಳವಾರ ಜಪ್ತಿ ಮಾಡಲಾಯಿತು.
ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮ ವ್ಯಾಪ್ತಿಯ ರೈತ ಕಂಠಯ್ಯ ಎಂಬುವರಿಗೆ ಸೇರಿದ ಭೂಮಿಯನ್ನು ಕುಡಿವ ನೀರಿನ ಯೋಜನೆಗೆ ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 2012ರಲ್ಲಿ ಖರೀದಿಸಲಾಗಿತ್ತು. ಇಲಾಖೆ ನೀಡಿದ ಪರಿಹಾರ ಕಡಿಮೆ ಎಂದು ಭೂಮಾಲೀಕ ಕೋರ್ಟ್‌ಗೆ 2014ರಲ್ಲಿ ಮೇಲ್ಮನವಿ ಸಲ್ಲಿಸಿದರು. ಹೆಚ್ಚುವರಿಯಾಗಿ 3.79ಲಕ್ಷ ರೂ. ನೀಡುವಂತೆ ನಗರದ ಜೆಎಂಎ್ಸಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿತ್ತು. ಕೋರ್ಟ್ ತೀರ್ಪಿನಂತೆ ಪರಿಹಾರ ಪಾವತಿಸದಿದ್ದರಿಂದ ಕಕ್ಷಿದಾರ ಪರ ವಕೀಲರಾದ ಪಿ.ವಿ.ಪಾಟೀಲ್, ಹೊನ್ನೂರಪ್ಪ ಬೆನ್ನೂರ್ ಸಮ್ಮುಖದಲ್ಲಿ ಇಲಾಖೆ ಎಇಇ ಸಂಚರಿಸುವ ಬುಲೆರೋ ವಾಹನವನ್ನು ಜಪ್ತಿ ಮಾಡಲಾಯಿತು.
ಈ ಬಗ್ಗೆ ಎಇಇ ನಾಗರಾಜ್ ಪ್ರತಿಕ್ರಿಯಿಸಿ, ಕೋರ್ಟ್ ವ್ಯಾಜ್ಯವಾಗಿದ್ದು, ಆದೇಶ ಪಾಲಿಸಲಾಗುವುದು. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.