ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಸಿಬಿಎಸ್ ಟೀಚರ್ಸ್ ವ್ಯಾಲಿಯಲ್ಲಿ ನಡೆಯುತ್ತಿರುವ ಜನಗಣತಿ ಸ್ಥಳಕ್ಕೆ ನೋಡಲ್ ಅಧಿಕಾರಿ ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮೇಲ್ವಿಚಾರಕ ಸಿದ್ಧಲಿಂಗೇಶ ಪೂಲಭಾವಿ, ಗಣತಿದಾರರಾದ ಶಬನಾ ಇತರರಿದ್ದರು.
- ಮನೆಗಣತಿ
- ಶುರುವಾಗಿದ್ದು
- ಮೇಲ್ವಿಚಾರಕರು
ಗಂಗಾವತಿ: ತಾಲೂಕಿನ ವಡ್ಡರಹಟ್ಟಿಯ ಸಿಬಿಎಸ್ ಟೀಚರ್ಸ್ ವ್ಯಾಲಿಯಲ್ಲಿ ನಡೆಯುತ್ತಿರುವ ಜನಗಣತಿ ಸ್ಥಳಕ್ಕೆ ನೋಡಲ್ ಅಧಿಕಾರಿ ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಆನ್‌ಲೈನ್ ನೋಂದಣಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಏ.15ರಿಂದ ಮನೆಗಣತಿ ಶುರುವಾಗಿದ್ದು, ಮೇಲ್ವಿಚಾರಕರು ಮತ್ತು ಗಣತಿದಾರರ ತಂಡ ಮನೆಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದೆ.
ಮೊಬೈಲ್ ಮೂಲಕವೇ ದತ್ತಾಂಶ ಸಂಗ್ರಹಿಸಬೇಕಿರುವ ಹಿನ್ನೆಲೆಯಲ್ಲಿ ತೊಡಕುಗಳನ್ನು ನಿವಾರಿಸಿದರಲ್ಲದೇ, ಗೌಪ್ಯತೆ ಕಾಯ್ದುಕೊಳ್ಳುವ ಬಗ್ಗೆ ಸಲಹೆ ನೀಡಿದರು. ಗಣತಿದಾರರ ಕಾರ್ಯವೈಖರಿ ಮತ್ತು ಮಾಹಿತಿ ಸಂಗ್ರಹಿಸುವ ರೀತಿಯನ್ನು ಪರಿಶೀಲಿಸಿದರು. ಗಣತಿ ಉದ್ದೇಶ ಮತ್ತು ಅಭಿವೃದ್ಧಿ ಕುರಿತು ಮನೆ ಮಾಲೀಕರಿಗೆ ವಿವರಿಸಿದರು. ನಂತರ ಹೇರೂರಿಗೆ ತೆರಳಿ ಅಲ್ಲಿನ ಗಣತಿ ಮೇಲ್ವಿಚಾರಕರು ಮತ್ತು ಗಣತಿದಾರರೊಂದಿಗೆ ಚರ್ಚಿಸಿದರು. ಮೇಲ್ವಿಚಾರಕ ಸಿದ್ಧಲಿಂಗೇಶ ಪೂಲಭಾವಿ, ಪ್ರಶಾಂತ ಮಾನಶೆಟ್ಟರ್, ಗಣತಿದಾರರಾದ ಶಬನಾ ಇತರರಿದ್ದರು.