ಕುಕನೂರಿನಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಆಚರಿಸಲಾಯಿತು. ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಹನಾಯಿ ಕಲಾವಿದ ದೊಡ್ಡ ಯಮನೂರಪ್ಪ ಭಜಂತ್ರಿ, ಪ್ರಮುಖರಾದ ಶ್ಯಾವಮ್ಮ ಭಜಂತ್ರಿ, ಬಸವರಾಜ ಕಿತ್ತೂರ್, ನಾಗರಾಜ ಭಜಂತ್ರಿ ಇದ್ದರು.
ಗವಾಯಿಗಳ ತತ್ವ-ಸಿದ್ಧಾಂತ ಅಳವಡಿಸಿಕೊಳ್ಳಿ
ಕುಕನೂರು: ನಾಡಿನ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಲಿಂ.ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ. ಸಂಗೀತ ಕ್ಷೇತ್ರದ ಕಲಾವಿದರಿಗೆ ಆರಾಧ್ಯ ದೈವ ಎಂದು ಶ್ರೀ ಪಂಚಾಕ್ಷರಿ ಸಂಗೀತ ಪಾಠಶಾಲೆಯ ಅಧ್ಯಕ್ಷ, ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಹೇಳಿದರು.
ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಪಂಚಾಕ್ಷರಿ ಸಂಗೀತ ಪಾಠಶಾಲೆ ಹಾಗೂ ಕಲಾವಿದರಿಂದ ಮಂಗಳವಾರ ಆಯೋಜಿಸಿದ್ದ ಪಂ.ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದವರು. ಲಕ್ಷಾಂತರ ಅಂಧ, ಅನಾಥ ಮಕ್ಕಳಿಗೆ ಊಟ ವಸತಿಯೊಂದಿಗೆ ಸಂಗೀತ ಜ್ಞಾನ ನೀಡಿ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದ್ದಾರೆ.
ಸಕಲ ವಾದ್ಯಗಳನ್ನು ನುಡಿಸಿ ಪರಿಣಿತಿ ಹೊಂದಿದ್ದರು. ಹಲವಾರು ಪುರಾಣ, ನಾಟಕಗಳನ್ನು ರಚಿಸಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ರೂಢಿಸಿಕೊಳ್ಳಿ. ಪುಟ್ಟರಾಜ ಗವಾಯಿ ಅವರಿಗೆ ಕರ್ನಾಟಕ ರತ್ನ ಹಾಗೂ ಭಾರತರತ್ನ ಪ್ರಶಸ್ತಿ ನೀಡಬೇಕಿದೆ ಎಂದರು.
ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಹನಾಯಿ ಕಲಾವಿದ ದೊಡ್ಡ ಯಮನೂರಪ್ಪ ಭಜಂತ್ರಿ, ಪ್ರಮುಖರಾದ ಶ್ಯಾವಮ್ಮ ಭಜಂತ್ರಿ, ಬಸವರಾಜ ಕಿತ್ತೂರ್, ನಾಗರಾಜ ಭಜಂತ್ರಿ, ಮುಕುಂದ ಭಜಂತ್ರಿ, ಚಂದ್ರಶೇಖರ್ ಕಿತ್ತೂರ, ಅಮರ್ ಹಿರೇಮನಿ, ಮಹೇಶ್ ಶಿರೂರ್, ಶ್ರೀಕಾಂತ್ ಭಜಂತ್ರಿ, ಹುಲ್ಲೇಶ್ ಭಜಂತ್ರಿ, ಜಾನಕಿ ಭಜಂತ್ರಿ ಇತರರಿದ್ದರು.