ಕುಕನೂರು ಎಪಿಎಂಸಿ ಸಭಾಂಗಣದಲ್ಲಿ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಒ ಬೆಟದೇಶ ಮಾಳೆಕೊಪ್ಪ ಮಾತನಾಡಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಹೇಬಣ್ಣ, ಜೆಸ್ಕಾಂ ಎಇಇ ನಾಗರಾಜ, ತಾಪಂ ಯೋಜನಾಧಿಕಾರಿ ಆನಂದ ಗರೂರು ಇದ್ದರು.
- ಪಿಡಿಒಗಳಿಗೆ ತಾಪಂ ಇಒ ಬೆಟದೇಶ ಮಾಳೆಕೊಪ್ಪ ಸೂಚನೆ
- ಕುಕನೂರು ತಾಪಂ ಪ್ರಗತಿ ಪರಿಶೀಲನಾ ಸಭೆ
ಕುಕನೂರು: ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿವ ನೀರು ಹಾಗೂ ಬೀದಿದೀಪ ಸಮರ್ಪಕವಾಗಿ ಕಲ್ಪಿಸಬೇಕು ಎಂದು ಪಿಡಿಒಗಳಿಗೆ ತಾಪಂ ಇಒ ಬೆಟದೇಶ ಮಾಳೆಕೊಪ್ಪ ಸೂಚಿಸಿದರು.
ಎಪಿಎಂಸಿ ಸಭಾಂಗಣದಲ್ಲಿ ತಾಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಗ್ರಾಪಂವಾರು ಕುಡಿವ ನೀರಿನ ಘಟಕಗಳು ಹಾಗೂ ಬೀದಿ ದೀಪಗಳ ವಿದ್ಯುತ್ ಬಿಲ್‌ಗಳ ಪ್ರಸ್ತುತ ಸ್ಥಿತಿಗತಿ, ಬಾಕಿ ಮೊತ್ತ, ಮರು ಹೊಂದಾಣಿಕೆ ಪ್ರಕ್ರಿಯಗೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲಿ ಸಾರ್ವಜನಿಕರಿಗೆ ನಿರಂತರ ಕುಡಿವ ನೀರಿನ ಸೌಲಭ್ಯ ಹಾಗೂ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಹಾಗೂ ವಿದ್ಯುತ್ ಬಿಲ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು ಎಂದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಹೇಬಣ್ಣ, ಜೆಸ್ಕಾಂ ಎಇಇ ನಾಗರಾಜ, ತಾಪಂ ಯೋಜನಾಧಿಕಾರಿ ಆನಂದ ಗರೂರು, ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ ಹಾಗೂ ಪಿಡಿಒಗಳು ಇದ್ದರು.