ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಡಿಗ-ಬಿಲ್ಲವ ಸಮುದಾಯ ಕೈಗೊಂಡಿರುವ ಪಾದಯಾತ್ರೆಯನ್ನು ಸಿದ್ದಾಪುರದಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಸಮುದಾಯದ ಜಿಲ್ಲಾ ಅಧ್ಯಕ್ಷ ಕಾಶೀ ವಿಶ್ವನಾಥ ಬಿಚ್ಚಾಲಿ, ಪ್ರಮುಖರಾದ ವೀರಭದ್ರಪ್ಪ ಅಬಕಾರಿ, ಚನ್ನಬಸನಗೌಡ ಮೈಲಾಪುರ, ರವಿಚಂದ್ರ ಹೊಸಮನಿ, ವಲಿ ಭಾಷ, ಚಿನ್ನಪ್ಪ ವೇಷಗಾರ ಇತರರಿದ್ದರು.
- ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಗ್ರಹ
- ಸಿದ್ದಾಪುರ ಪಾದಯಾತ್ರೆಗೆ ಸ್ವಾಗತ
ಸಿದ್ದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ತಾಪೂರ ತಾಲೂಕಿನ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಡಿಗ-ಬಿಲ್ಲವ ಸಮುದಾಯದಿಂದ ಬೆಂಗಳೂರಿಗೆ ಕೈಗೊಂಡಿರುವ 700 ಕಿ.ಮೀ. ಪಾದಯಾತ್ರೆಯನ್ನು ಬುಧವಾರ ಸಿದ್ದಾಪುರದಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.
ಪ್ರಣಾವನಂದ ಸ್ವಾಮೀಜಿ ಮಾತನಾಡಿ, ಪಾದಯಾತ್ರೆ ರಾಜ್ಯದ 8 ಜಿಲ್ಲೆಗಳ ಮೂಲಕ ಬೆಂಗಳೂರಿಗೆ ತಲುಪಲಿದೆ. ಈಡಿಗ ಸಮುದಾಯದ 26 ಪಂಗಡಗಳನ್ನು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವರ್ಗವೆಂದು ಸರ್ಕಾರ ಪರಿಗಣಿಸಬೇಕು. ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು. ಸಾರಾಯಿ ನಿಷೇಧದಿಂದ ಕುಲಕಸುಬು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸರ್ಕಾರ ಚಿತ್ತ ಹರಿಸಬೇಕು. ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಷ್ಠಾಪನೆ ಸೇರಿ ಒಟ್ಟು 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಆಗ್ರಹಿಸಲಾಗಿದೆ. ಫೆ.12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮುದಾಯದ ಶಕ್ತಿ ಪ್ರದರ್ಶನ ನಡೆಯಲಿದೆ. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮುದಾಯದ ಜಿಲ್ಲಾಧ್ಯಕ್ಷ ಕಾಶೀ ವಿಶ್ವನಾಥ ಬಿಚ್ಚಾಲಿ, ಪ್ರಮುಖರಾದ ವೀರಭದ್ರಪ್ಪ ಅಬಕಾರಿ, ಚನ್ನಬಸನಗೌಡ ಮೈಲಾಪುರ, ರವಿಚಂದ್ರ ಹೊಸಮನಿ, ವಲಿಬಾಷಾ, ಚಿನ್ನಪ್ಪ ವೇಷಗಾರ, ಮುಕ್ತಾರಖಾನ್, ಪಂಪಾಪತಿ ಮರಕುಂಬಿ, ಸೂರ್ಯಕಾಂತ್ ವಗ್ಗಾರ್, ಮಹೆಬೂಬ್ ಮುಲ್ಲಾ, ಪರಶುರಾಮ್ ಕೋರಿ, ಚನ್ನಮಲ್ಲಯ್ಯ ಸ್ವಾಮಿ, ಆಲಂಬಾಷಾ, ಸೋಮಶೇಖರ್ ಗೌಡ ಪೊ.ಪಾ, ವೆಂಕಟೇಶ ನಾಯಕ, ಈ. ಬಸವರಾಜ ಗೋತಗಿ, ರಾಮು ಈಳಿಗನೂರು, ನಾಗೇಶ್ವರಾವ್ ಸವಳ ಕ್ಯಾಂಪ್, ಜೆ.ಶ್ರೀನಿವಾಸ್, ಟಿ.ಬಾಲಾಜಿ, ಹುಲುಗೇಶ್ ಈಳಿಗನೂರು, ಚಂದ್ರಶೇಖರ, ಫಕೀರಗೌಡ ಇತರರಿದ್ದರು.