ವೇಮನ ಜಯಂತಿ ಅಂಗವಾಗಿ ಕೊಪ್ಪಳದಲ್ಲಿ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಡಿಡಿಪಿಯು ಜಗದೀಶ್​ ಜಿ.ಎಚ್​., ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ನಾಗರಾಜ ಡಿ., ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಕನ್ನಡ ಮತ್ತು ಸಂಸತಿ ಸಹಾಯಕ ನಿರ್ದೇಶಕ ಕರ್ಣಕುಮಾರ್​, ಸಮುದಾಯ ಮುಖಂಡರಾದ ಸೋಮಣ್ಣ, ಹುಲುಗಪ್ಪ ಬಾರಕೇರ್​, ರಮೇಶ್​ ಕಬ್ಬೇರ್​, ರಾಜು ಕಲಿಗಾರ ಇದ್ದರು.  
ಕೊಪ್ಪಳ

ವೇಮನ ಜಯಂತಿ 19ರಂದು:ಎಡಿಸಿ ಸಿದ್ರಾಮೇಶ್ವರ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಸಿದ್ರಾಮೇಶ್ವರ ಹೇಳಿಕೆ
ಕೊಪ್ಪಳ: ಜಿಲ್ಲಾಡಳಿತದಿಂದ ಜ.19ರಂದು ಮಹಾಯೋಗಿ ವೇಮನ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಎಡಿಸಿ ಸಿದ್ರಾಮೇಶ್ವರ ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಯಂತಿ ದಿನಂದು ಬೆಳಗ್ಗೆ 10.30 ಗಂಟೆಗೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ವೇಮನ ಭಾವಚಿತ್ರಕ್ಕೆ ವಿಶೇಷಪೂಜೆ, ಉಪನ್ಯಾಸ ಇತರ ಕಾರ್ಯಕ್ರಮ ಇರಲಿವೆ. ಅರ್ಥಪೂರ್ಣ ಮತ್ತು ವ್ಯವಸ್ಥಿತವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು.
ಸರ್ಕಾರಿ ಕಚೇರಿ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಿ. ಎಲ್ಲ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸಮುದಾಯ ಮುಖಂಡರಾದ ಕಾಶಿನಾಥ್​ ರಡ್ಡಿ, ಪ್ರಭು ಹೆಬ್ಬಾಳ, ಹನುಮರಡ್ಡಿ, ಚಂದ್ರಶೇಖರಗೌಡ ಪಾಟೀಲ್​, ಎಚ್​.ಸುರೇಶ, ಎನ್​.ಬಿ.ಪ್ರಭು, ವಿರುಪಣ್ಣ ನವೋದಯ ಇತರರಿದ್ದರು.