ಪೌಷ್ಟಿಕ ಆಹಾರವನ್ನು ತಿಪ್ಪೆ ಪಾಲು ಮಾಡಿದ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗಂಗಾವತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತಾಲೂಕು ಘಟಕದ ಕಾರ್ಯಕರ್ತರು ಸಿಡಿಪಿಒ ಜಯಶ್ರೀ ರಾಜಪುರೋಹಿತ್‌ಗೆ ಮನವಿ ಸಲ್ಲಿಸಿದರು. ವಿಭಾಗೀಯ ಅಧ್ಯಕ್ಷ ಆಂಜನೇಯ ಈಡಿಗೇರ್, ತಾಲೂಕಾಧ್ಯಕ್ಷ ಹನುಮಂತ ಕಂಬಾರ್, ಪದಾಧಿಕಾರಿಗಳಾದ ಸಿಖಂದರ್, ಹುಲಿಗೇಶ ಇತರರಿದ್ದರು. 
ಕೊಪ್ಪಳ

ತಿಪ್ಪೆಗೆ ಆಹಾರ ಎಸೆದವರ ವಿರುದ್ಧ ಕ್ರಮವಾಗಲಿ

ಪ್ರಮುಖ ಮುಖ್ಯಾಂಶಗಳು

  • ಕರವೇ ಸ್ವಾಭಿಮಾನಿ ಬಣ ಮನವಿ
  • ಗಂಗಾವತಿ ಸಿಡಿಪಿಒ ಕಚೇರಿ ಮುಂದೆ ಪ್ರತಿಭಟನೆ
ಗಂಗಾವತಿ: ಪೌಷ್ಟಿಕ ಆಹಾರವನ್ನು ತಿಪ್ಪೆ ಪಾಲು ಮಾಡಿದ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತಾಲೂಕು ಘಟಕದ ಕಾರ್ಯಕರ್ತರು ನಗರದ ಸಿಡಿಪಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಾಧ್ಯಕ್ಷ ಹನುಮಂತ ಕಂಬಾರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಪೌಷ್ಟಿಕತೆ ಪ್ರಮಾಣ ನಿಯಂತ್ರಣಕ್ಕಾಗಿ ಸರ್ಕಾರ ಪೌಷ್ಟಿಕ ಆಹಾರ ಉಚಿತ ವಿತರಣೆ ವ್ಯವಸ್ಥೆಯ ಯೋಜನೆ ಜಾರಿಗೆ ತಂದಿದೆ. ಗರ್ಭಿಣಿಯರು, ಮಕ್ಕಳು, ಬಾಣಂತಿಯರು ಮತ್ತು ಕಿಶೋರಿಯರಿಗಾಗಿ ಆಹಾರ ವಿತರಿಸಲಾಗುತ್ತಿದೆ. ಆದರೆ, ತಿಪ್ಪೆಗೆ ಹಾಕಿರುವುದು ಖಂಡನೀಯ. ಅಂಗನವಾಡಿ ಕೇಂದ್ರದಿಂದಲೇ ತಿಪ್ಪೆಗೆ ಹಾಕಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ನಗರ ಘಟಕದ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಸಿಡಿಪಿಒ ಜಯಶ್ರೀ ರಾಜಪುರೋಹಿತ್‌ಗೆ ಸಲ್ಲಿಸಿದರು. ವಿಭಾಗೀಯ ಅಧ್ಯಕ್ಷ ಆಂಜನೇಯ ಈಡಿಗೇರ್, ಪದಾಧಿಕಾರಿಗಳಾದ ಸಿಖಂದರ್, ಹುಲಿಗೇಶ, ಪರಶುರಾಂ, ಕಷ್ಣ ನಾಯಕ, ದಾವಲ್ ಸಾಬ್, ಅಹಮದ್, ಬಸವರಾಜ ಕಲ್ಗುಡಿ, ಮಂಜುನಾಥ ಇತರರಿದ್ದರು.