ಹೊರಗುತ್ತಿಗೆ ನೌಕರರ ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆ ಕೇಂದ್ರೀಯ ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾಧ್ಯಕ್ಷ ವಿಜಯ್ ದೊರೈರಾಜು, ವಿವಿಧ ಸಂಘಟನೆ ಪದಾಧಿಕಾರಿಗಳಾದ ಪರಶುರಾಮ್, ಬಾಬರ್, ಬರಾಹುದ್ದೀನ್, ಸಣ್ಣ ಹನುಮಂತಪ್ಪ ಹುಲಿಹೈದರ್ ಇತರರಿದ್ದರು.
ಗಂಗಾವತಿ: ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಹೊರಗುತ್ತಿಗೆ ನೌಕರರ ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆ ಕೇಂದ್ರೀಯ ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ವಿಜಯ್ ದೊರೈರಾಜು ಮಾತನಾಡಿ, ನಗರಸಭೆಯಲ್ಲಿ ಹೊರಗುತ್ತಿಗೆ ನೌಕರರ ಗುತ್ತಿಗೆ ಪಡೆಯುತ್ತಿರುವ ಎಂ.ಆರ್.ವೆಂಕಟೇಶ ಎಂಬುವರು ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದು, ವಿಚಾರಿಸಲು ಹೋದ ಸಂಘಟನೆ ಸದಸ್ಯರ ಮೇಲೆ ಹಲ್ಲೆ ನಡೆಸುವ ಮೂಲಕ ಉದ್ಧಟತನ ಮೆರೆದಿದ್ದಾರೆ. ನ್ಯಾಯ ಕೇಳಿದರೆ ಹಲ್ಲೆ ಮತ್ತು ದೌರ್ಜನ್ಯದಂತ ನೀಚ ಕೃತ್ಯಕ್ಕೆ ಏಜೆನ್ಸಿದಾರರು ಇಳಿಯುತ್ತಿದ್ದು, ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಂಭೀರ ಪರಿಗಣಿಸಿ ಏಜೆನ್ಸಿಯನ್ನು ಬ್ಲಾಕ್ ಲೀಸ್ಟ್‌ಗೆ ಹಾಕಬೇಕು. ಮಾಲೀಕ ಎಂ.ಆರ್.ವೆಂಕಟೇಶ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಪರಶುರಾಮ್, ಬಾಬರ್, ಬರಾಹುದ್ದೀನ್, ಸಣ್ಣ ಹನುಮಂತಪ್ಪ ಹುಲಿಹೈದರ್, ಕೇಶವನಾಯ್ಕ, ಜಡಿಯಪ್ಪ, ಗಿಡ್ಡಪ್ಪ, ಕರಿಮೂತಿ ಹನುಮಂತಪ್ಪ, ಶೇಖರಪ್ಪ, ಭೀಮಣ್ಣ, ಹುಸೇನಪ್ಪ, ಎಸ್.ಹನುಮಮ್ಮ, ಗಾಲಿ ಹುಲಿಗೆಮ್ಮ, ಬಂಕದ ಮನಿ ಹುಲಿಗೆಮ್ಮ, ನಾಗಮ್ಮ, ಗಂಗಮ್ಮ, ದುರುಗಪ್ಪ, ಮಾರುತಿ, ಅಲಂಸಾಬ್, ರೇಣುಕಮ್ಮ, ದ್ಯಾವಮ್ಮ, ಹುಲಿಗೆಮ್ಮ, ಉಮಾದೇವಿ ಇತರರಿದ್ದರು.