ಪದವಿ ಕಾಲೇಜುಗಳ ಮೂರನೇ ಹಾಗೂ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಹೆಚ್ಚಳವನ್ನು ತಕ್ಷಣ ಹಿಂಪಡೆಉವಂತೆ ಆಗ್ರಹಿಸಿ ಕೊಪ್ಪಳ ವಿವಿ ಕುಲಪತಿ ಡಾ. ಎಸ್. ವಿ. ಡಾಣಿ ಹಾಗೂ ಮೌಲ್ಯಮಾಪನ ಕುಲಪತಿ ರಮೇಶಗೆ ಮನವಿ ಸಲ್ಲಿಸಿದರು. ,ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲಾ, ಪದಾಧಿಕಾರಿಗಳಾದ ಹಮ್ಮಿಗೇಶ ಎಸ್.ಪಿ., ಆದಿತ್ಯ ಹವಳೆ, ಮನೋಹರ್ ಇದ್ದರು.
- ಎಬಿವಿಪಿಯಿಂದ ಕುಲಪತಿಗೆ ಮನವಿ
ಕೊಪ್ಪಳ : ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಮೂರನೇ ಹಾಗೂ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಹೆಚ್ಚಳವನ್ನು ತಕ್ಷಣ ಹಿಂಪಡೆದು, ಹಿಂದಿನ ಶುಲ್ಕವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಪ್ಪಳ ಜಿಲ್ಲಾ ಘಟಕವು ಗುರುವಾರ ತಾಲೂಕಿನ ತಳಕಲ್ನಲ್ಲಿನ ಕೊಪ್ಪಳ ವಿವಿಯಲ್ಲಿ ಕುಲಪತಿ ಡಾ. ಎಸ್.ವಿ ಡಾಣಿ ಹಾಗೂ ಮೌಲ್ಯಮಾಪನ ಕುಲಪತಿ ರಮೇಶಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕದಲ್ಲಿ ಏರಿಕೆ ಮಾಡಿರುವುದರಿಂದ ಬಡ, ಮಧ್ಯಮ ಹಾಗೂ ಗ್ರಾಮೀಣ ಹಿನ್ನೆಲೆಯ ಸಾವಿರಾರು ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸುವುದು ಕಷ್ಟಕರವಾಗುವ ಪರಿಸ್ಥಿತಿ ನಿಮಾರ್ಣವಾಗಿದೆ. ಶಿಕ್ಷಣವು ವ್ಯಾಪಾರವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಮೂರನೇ ಹಾಗೂ ಐದನೇ ಸೆಮಿಸ್ಟರ್ ಪ್ರವೇಶಾತಿ ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆದು, ಈ ಹಿಂದಿನ ಶುಲ್ಕವನ್ನೇ ಮುಂದುವರಿಸಿ ವಿದ್ಯಾರ್ಥಿಗಳ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆ ತಪ್ಪಿಸಬೇಕು ಎಂದು ಒತ್ತಾಯಿಸಿ. ಬೇಡಿಕೆ ಶೀಘ್ರ ಈಡೇರಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ಸೇರಿ ಹೋರಾಟ ನಡೆಸಲಾಗುವುದು. ಇದರಿಂದ ಉಂಟಾಗುವ ಎಲ್ಲ ಬೆಳವಣಿಗೆಗಳಿಗೆ ವಿಶ್ವವಿದ್ಯಾಲಯ ಆಡಳಿತವೇ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲಾ, ಪದಾಧಿಕಾರಿಗಳಾದ ಹಮ್ಮಿಗೇಶ ಎಸ್.ಪಿ., ಆದಿತ್ಯ ಹವಳೆ, ಮನೋಹರ್, ಗುರುಬಸವ ಗಡಿಹಳ್ಳಿ, ವಾಸವಿ, ಅಕ್ಷತ, ಆನಂದ್, ನಿರಂಜನ್, ಶ್ರೀಧರ್, ವೀರಭದ್ರಯ್ಯ, ಹನುಮೇಶ ಇತರರಿದ್ದರು.