ಕನಕಗಿರಿಯಲ್ಲಿ ಹೆಚ್ಚುವರಿ ಆಧಾರ್ ಸೇವಾ ಕೇಂದ್ರ ಆರಂಭಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಜಿಲ್ಲಾ ಘಟಕದಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ರಾಜ್ಯ ಸಮಿತಿ ಸದಸ್ಯ ಪಾಮಣ್ಣ ಅರಳಿಗನೂರು, ರಮೇಶ, ಚಂದ್ರಶೇಖರ ಇತರರಿದ್ದರು.
ಕನಕಗಿರಿ: ಪಟ್ಟಣದಲ್ಲಿ ಹೆಚ್ಚುವರಿ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಜಿಲ್ಲಾ ಘಟಕದಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಸಮಿತಿ ಸದಸ್ಯ ಪಾಮಣ್ಣ ಅರಳಿಗನೂರು ಮಾತನಾಡಿ, ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ್ ಕಾರ್ಡ್‌ಗಳ ಅವಶ್ಯವಿರುವುದರಿಂದ ಈ ಹಿಂದಿನ ಆಧಾರ್ ಕಾರ್ಡ್‌ಗಳಲ್ಲಿನ ತಿದ್ದುಪಡಿ, ಸೇರಿಸುವಿಕೆಗಳಿದ್ದು, ಪಟ್ಟಣದಲ್ಲಿ ಇರುವ ಏಕೈಕ ಆಧಾರ್ ಸೇವಾ ಕೇಂದ್ರ ಸಾಕಾಗುತ್ತಿಲ್ಲ. ಆಧಾರ್ ಅಪ್‌ಡೆಟ್ ಇತರ ಕಾರ್ಯಗಳನ್ನು ಒಂದೇ ಕೇಂದ್ರದಲ್ಲಿ ಮಾಡಬೇಕಿದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ. ದಿನಕ್ಕೆ 30-40 ಆಧಾರ್ ಕಾರ್ಡ್‌ಗಳ ಪರಿಷ್ಕರಣೆ ಮಾಡಲಾಗುತ್ತಿರುವುದರಿಂದ ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಆಧಾರ್ ಸೇವಾ ಕೇಂದ್ರದವರು ನೀಡುವ ಟೋಕನ್‌ಗಾಗಿ ಮುಂಜಾನೆಯಿಂದಲೇ ಸರದಿಯಲ್ಲಿ ನಿಲ್ಲುತ್ತಿರುವುದು ಕಂಡು ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು, ವೃದ್ಧರ ಅನುಕೂಲಕ್ಕಾಗಿ ಜಿಲ್ಲಾಡಳಿತ ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿ ಇನ್ನಷ್ಟು ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿದರು. ಪ್ರಮುಖರಾದ ನಾಗೇಶ ಬಾಸ್, ಚಂದ್ರಶೇಖರ ಸೂಡಿ ಇತರರಿದ್ದರು.