ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಆರ್. ಉದ್ಘಾಟಿಸಿದರು. ಕೊಪ್ಪಳ ವಿವಿ ಕುಲಪತಿ ಡಾ.ಎಸ್.ವಿ.ಡಾಣಿ, ಸಿಪಿಐ ವಿಶ್ವನಾಥ ಹಿರೇಗೌಡರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ, ವಕೀಲರ ಸಂದ ಅಧ್ಯಕ್ಷ ಎಚ್.ಆರ್.ನಾಯಕ್ ಇತರರಿದ್ದರು. 
ಕೊಪ್ಪಳ

ಪುರುಷನ ಯಶಸ್ಸಿಗೆ ಮಹಿಳೆಯ ಅನುಗ್ರಹ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ನ್ಯಾ. ಮಂಜುನಾಥ ಆರ್. ಅಭಿಪ್ರಾಯ
  • ಕುಷ್ಟಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕೊಪ್ಪಳ: ತನ್ನನ್ನು ತಾನು ದೀಪದಂತೆ ಉರಿಸಿ ಇಡೀ ಕುಟುಂಬವನ್ನು ಸಲಹುವವಳು ತಾಯಿ. ದೇಶಕ್ಕೆ ಧೀರ ಯೋಧರನ್ನು ಮತ್ತು ಅನ್ನದಾತರನ್ನು ನೀಡಿದ ಮಹಾನ್ ತಾಯಂದಿರ ಗೌರವಿಸುವ ದಿನವೇ ಈ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಕುಷ್ಟಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಆರ್.ತಿಳಿಸಿದರು.\
ಜಿಲ್ಲೆಯ ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು. ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಹೆಣ್ಣಿನ ಅನುಗ್ರಹ ಇರುತ್ತದೆ. ತಾಯಿ, ಅಕ್ಕ-ತಂಗಿ, ಹೆಂಡತಿ ಅಥವಾ ಮಗಳು ಯಾವುದಾದರೊಂದು ರೂಪದಲ್ಲಿ ಹೆಣ್ಣು ವಾದರಿಯಾಗಿದ್ದಾಳೆ. ಪುರುಷರು ಹೆಣ್ಣನ್ನು ಗೌರವಿಸುವುದನ್ನು ಕಲಿಯಬೇಕು. ಎಷ್ಟೇ ಕಷ್ಟ ಬಂದರೂ ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದರು.
ಸಿಪಿಐ ವಿಶ್ವನಾಥ ಹಿರೇಗೌಡರ ವಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳ ಶೋಷಣೆ ಹೇಗಿತ್ತು ಎಂಬುದು ನಮಗೆ ತಿಳಿದಿದೆ. ಆದರೆ, ಇಂದು ಕುಡಿತದ ಚಟದಿಂದ ಗಂಡಂದಿರು ಹಾಗೂ ಗಂಡು ಮಕ್ಕಳಿಂದ ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ಸಾವಾಜಿಕ ಪಿಡುಗಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿ ಕುಡಿತಕ್ಕೆ ದಾಸನಾದರೆ ಆ ಕುಟುಂಬ ಅನುಭವಿಸುವ ನರಕಯಾತನೆಯನ್ನು ನಾವು ಕಂಡಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ವಿವಿ ಕುಲಪತಿ ಡಾ.ಎಸ್.ವಿ.ಡಾಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್., ವಕೀಲರ ಸಂದ ಅಧ್ಯಕ್ಷ ಎಚ್.ಆರ್. ನಾಯಕ್, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಶೆಟ್ಟರ್, ಜಂಟಿ ಕಾರ್ಯದರ್ಶಿ ಮರಿಯಪ್ಪ ಲಿಂಗದಹಳ್ಳಿ, ಪ್ಯಾನೆಲ್ ವಕೀಲೆ ಲತಾ ಸ್ಥಾವರಮಠ ಹಾಗೂ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರೂಪಾದೇವಿ ವಿಜಯಪುರ ಇದ್ದರು.