ಗಂಗಾವತಿ ಶ್ರೀ ಶಂಕರಮಠದ ಶಾರದಾ ಮಂದಿರದಲ್ಲಿ ಗುರುಪೂರ್ಣಿಮಾ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳಾ ಭಜನಾ ಮಂಡಳಿಯಿಂದ ನಿರಂತರ ಭಜನೆ ಬುಧವಾರ ಜರುಗಿತು. ಧರ್ಮದರ್ಶಿ ನಾರಾಯಣರಾವ್ ವೈದ್ಯ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರಿದ್ದರು. 
ಕೊಪ್ಪಳ

ಸನ್ಮಾರ್ಗದತ್ತ ಕೊಂಡೊಯ್ಯುವವನೇ ನಿಜ ಗುರು

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಧರ್ಮದರ್ಶಿ ನಾರಾಯಣರಾವ್ ವೈದ್ಯ ಅಭಿಮತ
  • ವಿಶೇಷ ಧಾರ್ಮಿಕ ಕಾರ್ಯಕ್ರಮ ಆಚರಣೆ
ಗಂಗಾವತಿ: ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದ್ದರೂ ಭಾರತದ ಭವ್ಯ ಪರಂಪರೆಯಲ್ಲಿ ಗುರು ಸ್ಥಾನಕ್ಕೆ ತನ್ನದೇ ಆದ ಮಹತ್ವ ಇದೆ ಎಂದು ಶ್ರೀ ಶಾರದಾ ಮಂದಿರದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಶಾರದಾ ನಗರದ ಶ್ರೀ ಶಂಕರಮಠದ ಶಾರದಾ ಮಂದಿರದಲ್ಲಿ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ತಾಯಿ ಮೊದಲ ಗುರು ಎಂಬಂತೆ, ಬದುಕಿನ ಸಾರ್ಥಕತೆಗೆ ಅಜ್ಞಾನದಲ್ಲಿದ್ದ ವ್ಯಕ್ತಿಗಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವವನೇ ನಿಜವಾದ ಗುರು. ಸಂಸ್ಕಾರಯುತ ಜೀವನ ನಡೆಸಲು ಗುರುಗಳ ಆಶೀರ್ವಾದ ಅತ್ಯಗತ್ಯ ಎಂದರು.
ಆರ್ಯವೈಶ್ಯ ಸಮಾಜದ ಮುಖಂಡ ಸಂತೋಷ ಕೆಲೋಜಿ ಮಾತನಾಡಿದರು. ಶಾರದಾ ಶಂಕರ ಭಜನಾ ಮಂಡಳಿ, ಗಂಗಾಧರೇಶ್ವರ ಭಜನಾ ಮಂಡಳಿ, ಸತ್ಯದೇವ ಭಜನಾ ಮಂಡಳಿ, ಶ್ರೀ ಯೋಗೇಶ್ವರ ಯಾಜ್ಞವಲ್ಕೃ ಭಜನಾ ಮಂಡಳಿ ಸೇರಿದಂತೆ ಇತರ ಭಜನಾ ಮಂಡಳಿಯಿಂದ ಆದಿಗುರು ಶಂಕರಾಚಾರ್ಯರು ರಚಿಸಿದ ಕಲ್ಯಾಣವಷ್ಟಿ ನಿರಂತರ ಭಜನೆ ನೆರವೇರಿತು. ಪ್ರಮುಖರಾದ ರಾಘವೇಂದ್ರ ಮೇಗೂರ್, ಬಾಲಕಷ್ಣ ದೇಸಾಯಿ, ಮೋಹನ್ ಲೆಕ್ಕಿಹಾಳ, ರಾಘವೇಂದ್ರ ಅಳವಂಡಿಕರ್, ಸುನೀಲ್ ವೈದ್ಯ, ಪವನ್ ಜೋಶಿ ಇತರರಿದ್ದರು.
ನೀಲಕಂಠೇಶ್ವರ ಪ್ರಾಥಮಿಕ ಶಾಲೆ
ಶ್ರೀ ನೀಲಕಂಠೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಶಾಲಾಡಳಿತ ಮಂಡಳಿ ಅಧ್ಯಕ್ಷ ಶ್ರೀಕುಮಾರ ಐಲಿ ಮಾತನಾಡಿ, ಗುಣಮಟ್ಟದ ಶಿಕ್ಷಣದ ಜತೆಗೆ ಪರಂಪರೆ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಕಲ್ಪ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ಬಸಪ್ಪ ಶಿರಿಗೇರಿ ಉಪನ್ಯಾಸ ನೀಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೆಳದಿಂಗಳೂಟ ಆಯೋಜಿಸಲಾಗಿತ್ತು. ಶ್ರೀ ನೀಲಕಂಠೇಶ್ವರ ದೇವಾಲಯ ಸಮಿತಿ ಗೌರವಾಧ್ಯಕ್ಷ ಎಂ.ರವೀಂದ್ರನಾಥ ನಾಗಪ್ಪ, ಪ್ರಮುಖರಾದ ಶ್ಯಾವಿ ತಿಪ್ಪಣ್ಣ, ಬಸವರಾಜ ಕುರುಗೋಡು, ಎಸ್ಡಿಎಂಸಿ ಅಧ್ಯಕ್ಷೆ ಸುಮಾಬಂಡಿ, ಮುಖ್ಯಶಿಕ್ಷಕ ಸಿ.ನಾಗರಾಜ್ ಇತರರಿದ್ದರು.