ಗಂಗಾವತಿಯಲ್ಲಿ ಕಸಾಪ ತಾಲೂಕು ಘಟಕ ಹಮ್ಮಿಕೊಂಡಿದ್ದ ಪತ್ರಕರ್ತ ರಾಯಚೂರಿನ ಬಸವರಾಜಸ್ವಾಮಿ ರಚಿಸಿರುವ ಬಸವಗೀತೆ ಸಂಪುಟಗಳ ಗುಚ್ಛವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾನುವಾರ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್ ಇತರರಿದ್ದರು.
- ಮಾಜಿ ಶಾಸಕ ಪರಣ್ಣ ಮುನವಳ್ಳಿ ಅನಿಸಿಕೆ
ಗಂಗಾವತಿ: ಜಗಜ್ಯೋತಿ ಬಸವಣ್ಣವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ವೇದಿಕೆಯಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಶ್ರೀ ಗಂಗಾಧರೇಶ್ವರ ಕಲ್ಯಾಣ ಮಂಟಪದಲ್ಲಿ ಕಸಾಪ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತ ರಾಯಚೂರಿನ ಬಸವರಾಜಸ್ವಾಮಿ ರಚಿಸಿರುವ ಬಸವಗೀತೆ ಸಂಪುಟಗಳ ಗುಚ್ಛ ಬಿಡುಗಡೆಗೊಳಿಸಿ ಮಾತನಾಡಿದರು.
ವಚನ ಸಾಹಿತ್ಯ ಸಾರ್ವಕಾಲಿಕ ಮೌಲ್ಯಯುತವಾಗಿದ್ದು, ವಚನಗಳ ವಿಶ್ಲೇಷಣೆ ಸ್ವರೂಪವೇ ಬಸವಗೀತೆ ಸಾರ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಬಸವಗೀತೆ ಗ್ರಂಥ ವಿಶೇಷತೆ ಹೊಂದಿದ್ದು, ಪ್ರತಿಯೊಬ್ಬರ ಮನೆಯಲ್ಲಿರಬೇಕಾದ ಪುಸ್ತಕ ಎಂದರು.
ಸಂಪುಟಗಳ ಗುಚ್ಛ ರಚನೆಕಾರ ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿದರು. ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್, ಉಪನ್ಯಾಸಕರಾದ ಪವನಕುಮಾರ ಗುಂಡೂರು, ಎ.ಕೆ.ಮಹೇಶಕುಮಾರ, ಡಾ.ಬಸವರಾಜ ಗೌಡನಭಾವಿ, ಕೆಸಿಎಸ್ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ವೈದ್ಯರಾದ ಡಾ.ಶಿವಕುಮಾರ ಮಾ.ಪಾಟೀಲ್, ಡಾ.ರಾಜಶೇಖರ್ ನಾರಿನಾಳ್, ಸಾಹಿತಿಗಳಾದ ರುದ್ರಮ್ ಹಾಸಿನಾಳ್, ನಾಗಭೂಷಣ ಅರಳಿ ಸಂಪುಟ ಗುಚ್ಛದ ಕುರಿತು ವಿಶ್ಲೇಷಿಸಿದರು.
ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಎಂ.ಆರಾಳ್, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಪದಾಧಿಕಾರಿಗಳಾದ ರಮೇಶ ಬಾಳೇಕಾಯಿ, ಶಿವಾನಂದ ತಿಮ್ಮಾಪುರ, ಸುರೇಶ ಕಲಾಪ್ರಿಯ, ಪ್ರಮುಖರಾದ ರುದ್ರಗೌಡ ಪಾಟೀಲ್, ಸೋಮಶೇಖರ್ ಕಂಪ್ಲಿ ಇತರರಿದ್ದರು.