ಅಳವಂಡಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೀಚಕನ ವಧೆ ತೊಗಲು ಗೊಂಬೆಯಾಟ ಪ್ರದರ್ಶನ ನಡೆಯಿತು.
- ಕೀಚಕನ ವಧೆ ತೊಗಲು ಗೊಂಬೆಯಾಟ ಪ್ರದರ್ಶನ
ಅಳವಂಡಿ: ಮಳೆಗಾಗಿ ಪ್ರಾರ್ಥಿಸಿ ಶ್ರೀ ಶಾಂತಮ್ಮ ದೇವಿ ದೇವಸ್ಥಾನದ ಮುಂದೆ ಸೋಮವಾರ ವಿರಾಟ ಪರ್ವ ಅರ್ಥಾತ್ ಕೀಚಕನ ವಧೆ ತೊಗಲು ಗೊಂಬೆಯಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕೇಶಪ್ಪ ಶಿಳ್ಳೆಕ್ಯಾತರ್ ತಂಡದಿಂದ ಕಲಾ ಪ್ರದರ್ಶನ ನಡೆಯಿತು.
ಕಲಾವಿದ ಕೇಶಪ್ಪ ಶಿಳ್ಳೆಕ್ಯಾತರ್ ಮಾತನಾಡಿ, ಜನಪದ ಕಲೆಗಳು ಕೇವಲ ಮನರಂಜನೆಯ ಸಾಧನಗಳಲ್ಲ. ಪ್ರಕೃತಿಯನ್ನು ಆರಾಧಿಸುವ ಪವಿತ್ರ ಮಾಧ್ಯಮಗಳು ಎಂದರು. ಪ್ರಮುಖರಾದ ವಸಂತ, ರತ್ನಮ್ಮ, ವಿನೋದಪ್ಪ ಮಾಗಳದ, ಶಿವಗ್ಯಾನಪ್ಪ ನೀಲಿ ಹಿಂಡರ, ಶಿವಾನಂದಯ್ಯ ದೊಡ್ಡಮನಿ, ಸಿದ್ದಯ್ಯ ದೊಡ್ಡಮನಿ, ಹನುಮಂತಪ್ಪ ಜೋಗಿನ, ವಿರುಪಯ್ಯ ಹಾದಿಮನಿ, ತಿಪ್ಪಣ್ಣ ತಳವಾಳ, ಶ್ರೀಶೈಲಪ್ಪ ಶೆಟ್ಟರ, ಬಸಯ್ಯ ದೊಡ್ಡಮನಿ ಇತರರಿದ್ದರು.