ಕನಕಗಿರಿ ಶ್ರೀ ಕನಕಾಚಲ ದೇವಸ್ಥಾನ ಮುಂಭಾಗದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಕ್ಕಾಗಿ ಬಾಟಲಿ ಮಾದರಿ ತೊಟ್ಟಿ ಇರಿಸಿರುವುದು.. 
ಕೊಪ್ಪಳ

ಜನಾಕರ್ಷಿಸಿದ ಪ್ಲಾಸ್ಟಿಕ್ ಸಂಗ್ರಹ ತೊಟ್ಟಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಧಿಕಾರ
  • ಪ್ಲಾಸ್ಟಿಕ್
  • ಕನಕಾಚಲಪತಿ
ಕನಕಗಿರಿ: ಹಂಪಿ ಪ್ರಾಧಿಕಾರದಿಂದ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಸಂಗ್ರಹಕ್ಕಾಗಿ ಬಾಟಲ್ ಮಾದರಿ ತೊಟ್ಟಿಗಳನ್ನು ಅಳವಡಿಸಲಾಗಿದೆ.
ರಾಜ್ಯದ ಎಲ್ಲ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದರ ಬೆನ್ನಲ್ಲೇ ಹಂಪಿ ಪ್ರಾಧಿಕಾರದಲ್ಲಿ ಪ್ಲಾಸ್ಟಿಕ್, ಬಾಟಲ್ ಸಂಗ್ರಹಕ್ಕಾಗಿ ಬಾಟಲಿ ಮಾದರಿ ತೊಟ್ಟಿಯನ್ನು ಸಿದ್ಧಪಡಿಸಲಾಗಿದೆ. ದೇವಸ್ಥಾನ ಆವರಣ, ಭೋಜನಾಲಯ ಸೇರಿದಂತೆ ಅಗತ್ಯ ಸ್ಥಳದಲ್ಲಿ ಇಡಲಾಗಿದೆ. ಬಾಟಲ್ ಮಾದರಿ ತೊಟ್ಟಿ ಭಕ್ತರನ್ನು ಆಕರ್ಷಿಸುತ್ತಿದ್ದು, ಇನ್ಮುಂದೆ ಪ್ಲಾಸ್ಟಿಕ್ ಹಾಗೂ ನೀರು, ತಂಪು ಪಾನೀಯ ಬಾಟಲಿಗಳನ್ನು ಈ ತೊಟ್ಟಿಯಲ್ಲಿ ಹಾಕುವಂತೆ ದೇವಸ್ಥಾನ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.
ಮೇ 16 ಮತ್ತು 17ರಂದು ನಡೆಯುವ ಕನಕಗಿರಿ ಉತ್ಸವಕ್ಕೆ ಲಕ್ಷಾಂತರ ಜನ ಬರಲಿದ್ದು, ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಮುರುಡಿ ತಿಳಿಸಿದರು.
ಆಕರ್ಷಕವಾಗಿರುವ ಈ ತೊಟ್ಟಿಯಲ್ಲಿ ಜನ ಪ್ಲಾಸ್ಟಿಕ್ ಹಾಗೂ ಬಾಟಿಲಿಗಳನ್ನು ಹಾಕುತ್ತಿದ್ದಾರೆ. ಅಧಿಕಾರಿಗಳ ಈ ಹೊಸ ಆಲೋಚನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.