ಗಂಗಾವತಿ ಆರ್ಯ ಈಡಿಗ ಸಮಾಜದ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ತಾಲೂಕಾಧ್ಯಕ್ಷ ಈ.ನಾಗರಾಜ್ ಇತರರಿದ್ದರು.
ಗಂಗಾವತಿ: ಮೌಢ್ಯ, ಅಜ್ಞಾನ ಮತ್ತು ಅಂಧಕಾರ ದೂರ ಮಾಡುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಅಪಾರ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ನಗರದ ಆರ್ಯ ಈಡಿಗ ಸಮಾಜದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸಮಾನತೆ, ಸೌಹಾರ್ದ ಮತ್ತು ಮಹಿಳಾ ಹಕ್ಕು ಪ್ರತಿಪಾದಿಸಿದ ಶ್ರೇಷ್ಠ ದಾರ್ಶನಿಕ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಮಾಜ ಸುಧಾರಣೆ ಚಿಂತನೆ ಮೂಲಕ ಜನರಿಗೆ ಉದಾತ್ತ ತತ್ವಸಿದ್ಧಾಂತಗಳನ್ನು ನೀಡಿದ್ದಾರೆ ಎಂದರು. ಸಮಾಜದ ತಾಲೂಕಾಧ್ಯಕ್ಷ ಈ.ನಾಗರಾಜ, ಪ್ರಮುಖರಾದ ರಮೇಶ್ ಈಡಿಗ, ಕೆ.ಶ್ರವಣಕುಮಾರ್, ವಿ.ನಾಗರಾಜ, ತಿರುಮಲೇಶ ಮರಕುಂಬಿ ಮಂಜುನಾಥ್ ಈಡಿಗ, ಆನಂದರಾವ್, ಎನ್.ವೆಂಕಟೇಶ, ವೀರಭದ್ರಪ್ಪ ನಾಯಕ, ಶರಣೇಗೌಡ ಮಾಲಿಪಾಟೀಲ್, ಎಂ.ಸರ್ವೇಶ ಇತರರಿದ್ದರು.
ತಾಲೂಕಾಡಳಿತ ಕಚೇರಿ: ತಾಲೂಕಾಡಳಿತ ಸೌಧ ಕಚೇರಿಯಲ್ಲಿ ಕಂದಾಯ ಇಲಾಖೆಯಿಂದ ಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಉಪ ತಹಸೀಲ್ದಾರ್ ವೆಂಕಟೇಶ ಜೋಶಿ ಮಾತನಾಡಿದರು. ಶಿರಸ್ತೇದಾರರಾದ ಜೆ.ಎನ್.ಶ್ರೀಕಂಠ, ಸೂರ್ಯಕಾಂತ ನಾಯಕ, ಪ್ರಕಾಶ ನಾಯಕ, ಗಾಯತ್ರಿ, ನಾಗರತ್ನಮ್ಮ, ಕವಿತಾ, ಮೇಘಾ ಇತರರಿದ್ದರು.