ಗಂಗಾವತಿ ತಾಲೂಕಿನ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸ್ವಸ್ಥೃ ಸಮಾಜ ನಿರ್ಮಾಣಕ್ಕಾಗಿ ಸಿದ್ಧಗಂಗಾ ಮಠದಿಂದ ಹಮ್ಮಿಕೊಂಡಿದ್ದ ಅರಿವಿನ ಯಾತ್ರೆಗೆ ಕಾರ್ಯಕ್ರಮದಲ್ಲಿ ಶ್ರೀಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಸಿಇಒ ನರೇಶ, ಆಡಳಿತ ನಿರ್ದೇಶಕ ಎಚ್.ಕೆ.ಚಂದ್ರಮೋಹನ್ ಇತರರಿದ್ದರು.
- ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಲಹೆ
ಗಂಗಾವತಿ: ಭಾರತೀಯ ಪರಂಪರೆಯಲ್ಲಿ ಜ್ಞಾನ ಮತ್ತು ಗುರುವಿಗೆ ಶ್ರೇಷ್ಠ ಸ್ಥಾನವಿದ್ದು, ಪ್ರತಿಯೊಬ್ಬರಲ್ಲೂ ಅರಿವಿನ ಚಿಂತನೆ ಜಾಗೃತವಾಗಬೇಕಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀರಾಮನಗರ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸ್ವಸ್ಥೃ ಸಮಾಜ ನಿರ್ಮಾಣಕ್ಕಾಗಿ ಸಿದ್ಧಗಂಗಾ ಮಠದಿಂದ ಬುಧವಾರ ಹಮ್ಮಿಕೊಂಡಿದ್ದ ಅರಿವಿನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸರಿ, ತಪ್ಪು ಕುರಿತು ಸ್ಪಷ್ಟತೆ ಹೊಂದಿರಬೇಕು. ಶಿಕ್ಷಣ ಅಂಕಗಳನ್ನು ನೀಡುವುದಕ್ಕೆ ಸೀಮಿತವಾಗದೇ ಮೌಲ್ಯವರ್ಧನೆಗೆ ಪೂರಕವಾಗಬೇಕು. ಗುರು-ಹಿರಿಯರನ್ನು, ತಂದೆ-ತಾಯಿಯನ್ನು ಗೌರವಿಸಬೇಕು. ಸಚ್ಚಾರಿತ್ರೃ ಮತ್ತು ಸೇವಾ ಮನೋಭಾವ ಬೆಳೆಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು. ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನೆಕ್ಕಂಟಿ ಸೂರಿಬಾಬು ಮಾತನಾಡಿದರು.
ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಸಿಇಒ ನರೇಶ, ಆಡಳಿತ ನಿರ್ದೇಶಕ ಎಚ್.ಕೆ.ಚಂದ್ರಮೋಹನ್, ಶೈಕ್ಷಣಿಕ ಮುಖ್ಯಸ್ಥೆ ಎಸ್.ಕೃಷ್ಣವೇಣಿ, ಉಪ ಪ್ರಾಚಾರ್ಯೆ ಜೆ.ಲಕ್ಷ್ಮೀ, ಪಿಆರ್‌ಎಂ ನಿಂಗಪ್ಪ, ಪಿಆರ್‌ಒಗಳಾದ ಮಲ್ಲನಗೌಡ, ಮಂಜುನಾಥ ಇತರರಿದ್ದರು.