ಗಂಗಾವತಿ ಅಂಬೇಡ್ಕರ್ ವೃತ್ತದ ಬಳಿ ನಿವೇಶನ ವಸತಿ ರಹಿತರ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ರ‌್ಯಾಲಿ ನಡೆಸಿದರು. ಸಿಪಿಐ ರಾಜ್ಯ ಸಂಯೋಜಕ ಸ್ವಾತಿ ಸುಂದರೇಶ, ಪದಾಧಿಕಾರಿಗಳಾದ ಎ.ಹುಲುಗಪ್ಪ, ಲಕ್ಷ್ಮಣ ನಾಯಕ, ಶೇಕಮ್ಮ ಹೊಸಳ್ಳಿ, ಗಂಗಮ್ಮ, ಹಂಪಸದುರ್ಗ ಇತರರಿದ್ದರು. 
ಕೊಪ್ಪಳ

ಮನೆ ನಿರ್ಮಾಣಕ್ಕೆ 5ಲಕ್ಷ ರೂ.ಅನುದಾನ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ವಸತಿ
  • ನಿವೇಶನ
  • ರಹಿತರಿಗೆ
ನಿವೇಶನ ವಸತಿ ರಹಿತರ ಹೋರಾಟ ಸಮಿತಿ ಪ್ರತಿಭಟನೆ
ಗಂಗಾವತಿ: ವಸತಿ ಮತ್ತು ನಿವೇಶನ ರಹಿತರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ನಿವೇಶನ ವಸತಿ ರಹಿತರ ಹೋರಾಟ ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೂ ಸಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ರ‌್ಯಾಲಿ ನಡೆಸಿದರು. ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು. ಸಿಪಿಐ ರಾಜ್ಯ ಸಂಯೋಜಕ ಸ್ವಾತಿ ಸುಂದರೇಶ ಮಾತನಾಡಿ, ಜಿಲ್ಲೆಯಲ್ಲಿ ವಸತಿ ಮತ್ತು ನಿವೇಶನ ರಹಿತರ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದರಿಂದ ಮನೆ ಮಾಲೀಕರಿಂದ ಕಿರುಕುಳಕ್ಕೊಳಗಾಗುತ್ತಿದ್ದು, ಸ್ವಂತ ಸೂರಿನ ವ್ಯವಸ್ಥೆ ಮರೀಚಿಕೆಯಾಗಿದೆ. ಆಶ್ರಯ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ಈಡೇರಿದಿಲ್ಲ. ನಿವೇಶನ ರಹಿತರಿಗೆ ನಿವೇಶನ ವಿತರಿಸುವುದರ ಜತೆಗೆ, ಮನೆ ನಿರ್ಮಿಸಿಕೊಳ್ಳಲು 5ಲಕ್ಷ ರೂ. ಅನುದಾನ ನೀಡಬೇಕು. ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಮಲ್ಲಯ್ಯ ಯರಡೋಣಿ, ಕಂಟೆಪ್ಪ ಸಿಂಗನಾಳ, ಮಂಜುನಾಥ ಗುಂಡೂರು, ಸುನೀತಾ, ನೂರಸಾಬ್, ತಾಯಮ್ಮ, ನೀಲಮ್ಮ, ತಾಹೇರಾಬೇಗಂ ಇತರರಿದ್ದರು.