ಕುಷ್ಟಗಿಯ ಶ್ರೀ ಬುತ್ತಿಬಸವೇಶ್ವರ ಸಭಾಂಗಣದಲ್ಲಿ ಶನಿವಾರ ಸಾಮಾಜಿಕ ನಾಟಕವನ್ನು ಬಿಜೆಪಿಯ ಪ್ರಮುಖ ರವಿಯಜ್ಜ ಮದ್ದಾನಿ ಹಿರೇಮಠ ಉದ್ಘಾಟಿಸಿದರು. ಪ್ರಮುಖರಾದ ಸುರೇಶ ಸೇಬಿನಕಟ್ಟಿ, ಶರಣು ಹಿರೇಮಠ, ದೇವರಾಜ ಹಜಾಳದ ಇತರರಿದ್ದರು.
ಕುಷ್ಟಗಿ: ಸಮಾಜದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಜನಸಾಮಾನ್ಯರಿಗೆ ತಿಳಿಯುವಂತೆ ಹೇಳುವ ವಿಶೇಷ ಕಲೆ, ಸಮಾಜದ ಅಂಕುಡೊಂಕು ತಿದ್ದುವಲ್ಲಿ ನಾಟಕಗಳು ಸಹಕಾರಿಯಾಗಿವೆ ಎಂದು ಬಿಜೆಪಿಯ ಪ್ರಮುಖ ರವಿಯಜ್ಜ ಮದ್ದಾನಿ ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಗುಳೇದ ಗುಡ್ಡದ ಶ್ರೀ ಗುರು ಪಂ.ಪುಟ್ಟರಾಜ ಕವಿ ಗವಾಯಿಗಳ ಮಹಿಳಾ ಕಲಾ ಬಳಗ (ಹಂಸನೂರ) ಏರ್ಪಡಿಸಿದ್ದ ಯಮನ್ ಕುಮಾರ್ ವಿರಚಿತ ‘ರೊಕ್ಕಾ ಇದ್ದರೂ ಸೊಕ್ಕಿರಬಾರದು’ ಎಂಬ ಸಾಮಾಜಿಕ ನಾಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಈ ನಾಟಕದಲ್ಲಿ ಎಲ್ಲ ಪಾತ್ರಧಾರಿಗಳು ಮಹಿಳೆಯರೇ ನಿರ್ವಹಿಸಿರುವುದು ವಿಶೇಷವಾಗಿದ್ದು, ಮಾದರಿಯಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಬಸವರಾಜ ಬುಡಕುಂಟಿ, ಮುಖಂಡರಾದ ಸುಕಮುನಿ ಕೊರಡಕೇರಾ, ಸುರೇಶ ಸೇಬಿನಕಟ್ಟಿ, ದೇವರಾಜ ಹಜಾಳದ, ಶರಣು ಹಿರೇಮಠ, ಗುಳೇದಗುಡ್ಡ ಕಂಪನಿ ಮಾಲೀಕ ಹನುಮೇಶ ಹುಳ್ಕಿಹಾಳ, ಕಲಾವಿದರಾದ ಭಾಗ್ಯ, ರಂಜಿತಾ, ಶೈಲಕ್ಕ, ಸ್ವಾತಿ, ರಕ್ಷಿತಾ, ಅರ್ಚನಾ, ಐಶ್ವರ್ಯ ಇದ್ದರು.