ಹನುಮಸಾಗರದ ಪಪಂ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಇದ್ದರು. 
ಕೊಪ್ಪಳ

ಶಾಲೆಗೊಂದು ಸಾಂಸ್ಕೃತಿಕ ಚಟುವಟಿಕೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿಕೆ
  • ಹನುಮಸಾಗರ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆ
ಹನುಮಸಾಗರ: ಎಲ್ಲರೂ ಸೇರಿ 80ನೇ ಸ್ವಾತಂತ್ರ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸೋಣ ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.
ಇಲ್ಲಿನ ಪಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಲ್ಲ ಕಡೆ ಧ್ವಜಾರೋಹಣ ಆದ ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಒಂದು ಶಾಲೆಗೆ ಒಂದು ಚಟುವಟಿಕೆ ನೀಡಲಾಗುವುದು. ಇದಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಈ ಬಾರಿ ಕೆಪಿಎಸ್‌ನ ಬಾಲಕರ ಸರ್ಕಾರಿ ಪ್ರೌಢ ಶಾಲೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದು, ಪಪಂನಿಂದ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.
ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಬೆಳಗ್ಗೆ 6.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಭಾತ್‌ಪೇರಿ ನಡೆಯಲಿದ್ದು, 8.30ರೊಳಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ತಲುಪಿ ನಂತರ ಶಾಲೆಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು. ಶಿಕ್ಷಕರಾದ ರಾಜಕುಮಾರ ನಾಯಕ್, ಬಸವರಾಜೇಶ್ವರಿ ಸಜ್ಜನ, ಭಾರತಿ ದೇಸಾಯಿ, ಪ್ರಕಾಶ ಹಿರೇಮಠ, ಶರಣಪ್ಪ ವಡ್ಡರ, ಬಸಪ್ಪ ಬಂಡಿವಡ್ಡರ, ಅನಿಲ್ ಸಂಗಮ, ಈರಣ್ಣ ಅಂಗಡಿ, ವಿಷ್ಣು ರಜಪೂತ, ಮೈಬೂಬಸಾಬ್ ಬಾಗವಾನ, ಹನುಮೇಶ ಗೊಲ್ಲರ ಇತರರಿದ್ದರು.