ಗಂಗಾವತಿ ವಿಪ್ರ ನಗರದ ವೀರೇಶ್ವರ ಪುಣ್ಯಾಶ್ರಮದ ಶಾಖಾ ಮಠದಲ್ಲಿ ತ್ರಿಭಾಷಾ ಕವಿ ಡಾ.ಪಂಡಿತ ಪುಟ್ಟರಾಜ್ ಗವಾಯಿಗಳ ಪುಣ್ಯಸ್ಮರಣೆ ಮತ್ತು ಸ್ವರ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿದರು. ಕಲಾವಿದರಾದ ಖಾಸೀಂಅಲಿ ಮುದ್ದಾಬಳ್ಳಿ, ಕನಕಪ್ಪ ಚಿತ್ರಗಾರ ಇತರರಿದ್ದರು. 
ಕೊಪ್ಪಳ

ನಿರ್ಗತಿಕರಿಗೆ ಆಶ್ರಯ ನೀಡುವ ಪುಣ್ಯಾಶ್ರಮ

ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಆಶೀರ್ವಚನ

ಗಂಗಾವತಿ: ಅಂಧರು, ಅಂಗವಿಕಲರು, ಅನಾಥರು ಹಾಗೂ ನಿರ್ಗತಿಕರಿಗೆ ಆಶ್ರಯ ನೀಡಿ ಸ್ವಾವಲಂಭಿಗಳನ್ನಾಗಿ ರೂಪಿಸುವ ಪುಣ್ಯ ಕಾರ್ಯವನ್ನು ಪುಣ್ಯಾಶ್ರಮ ಮಾಡುತ್ತಿದೆ ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಹೇಳಿದರು.

ವಿಪ್ರ ನಗರದ ವೀರೇಶ್ವರ ಪುಣ್ಯಾಶ್ರಮದ ಶಾಖಾ ಮಠದಲ್ಲಿ ಮಂಗಳವಾರ ತ್ರಿಭಾಷಾ ಕವಿ ಡಾ.ಪಂಡಿತ ಪುಟ್ಟರಾಜ್ ಗವಾಯಿಗಳ ಪುಣ್ಯಸ್ಮರಣೆ ಮತ್ತು ಸ್ವರ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಾವಿದ ಖಾಸೀಂ ಅಲಿ ಮುದ್ದಾಬಳ್ಳಿ ಮಾತನಾಡಿ, ಸರಳತೆ, ಮಾನವೀಯತೆ ಹಾಗೂ ಶಿಷ್ಯರ ಮೇಲಿನ ಅಪಾರ ಪ್ರೀತಿ ಪುಟ್ಟರಾಜ ಗವಾಯಿಗಳಲಿದ್ದು, ಶಾಖಾಮಠದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸ್ವರ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಲಾವಿದರಾದ ವೆಂಕಟೇಶ ದಾಸನಾಳ್, ಸುಧಾರಾಣಿ, ಸದಾನಂದ ಶೇಟ್, ಜುಜ್ಜುವರಪು ನಾಗೇಶ್ವರರಾವ್, ದೊಡ್ಡಯ್ಯ ಕಲ್ಲೂರು, ಶಂಕ್ರಪ್ಪ ಬಿನ್ನಾಳ್, ಸಣ್ಣಪ್ಪ ಕಮ್ಮಾರ್, ಕನಕಪ್ಪ ಚಿತ್ರಗಾರ, ಶರಣಬಸವನಗೌಡರಿಂದ ಭಕ್ತಿಗೀತೆ, ದಾಸವಾಣಿ ಸೇರಿ ಕಲಾ ಗಾಯನ ನೆಡೆಯಿತು. ಪ್ರಮುಖರಾದ ಕನಕಪ್ಪ ಚಿತ್ರಗಾರ, ಹೇಮಣ್ಣ ಸಂಗಾಪುರ, ಕೀರೇಶ್ವರ ಸ್ವಾಮಿ, ಪುರುಷೋತ್ತಮ ರೆಡ್ಡಿ, ಮಲ್ಲಿಕಾರ್ಜುನ ಗೌಡ ಇತರರಿದ್ದರು.