ಸಿದ್ದಾಪುರ ಸಮೀಪದ ಸಿಂಗನಾಳದಲ್ಲಿ ನೀರಿಗಾಗಿ ಸಾರ್ವಜನಿಕರು ಬಿಂದಿಗೆ ಹಿಡಿದು ನಿಂತಿರುವುದು. 
ಕೊಪ್ಪಳ

ಸಿಂಗನಾಳದಲ್ಲಿ ಕೆಟ್ಟುನಿಂತ ಬೋರ್‌ವೆಲ್

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಕುಡಿವ ನೀರಿನ ಸಮಸ್ಯೆ

ಸಿಂಗನಾಳದಲ್ಲಿ ಕೆಟ್ಟುನಿಂತ ಬೋರ್‌ವೆಲ್

ಸಿದ್ದಾಪುರ: ಸಮೀಪದ ಸಿಂಗನಾಳ ಗ್ರಾಮದ 1ನೇ ವಾರ್ಡ್‌ನಲ್ಲಿ ಕೆಲ ವಾರಗಳಿಂದ ಕುಡಿವ ನೀರಿನ ಸಮಸ್ಯೆಯಾಗಿದ್ದು, ಗ್ರಾಪಂ ಸಿಬ್ಬಂದಿ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಒಂದನೇ ವಾರ್ಡ್‌ನಲ್ಲಿರುವ ಎಸ್ಸಿ ಕಾಲನಿಯಲ್ಲಿ ಬೋರ್‌ವೆಲ್‌ಗಳು ಕೆಟ್ಟಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮವಹಿಸಿಲ್ಲ. ಇದರಿಂದ ಸಾರ್ವಜನಿಕರು ನೀರಿಗಾಗಿ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆ ಆರಂಭವಾಗಿದ್ದು, ನೀರಿನ ಅವಶ್ಯಕತೆ ಹೆಚ್ಚಾಗಿದೆ. ಜನ ಹಾಗೂ ಜಾನುವಾರುಗಳಿಗೂ ಜೀವಜಲ ಅಗತ್ಯ. ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. 1ನೇ ವಾರ್ಡ್ ಜನರು ಬೇರೆಡೆಗೆ ತೆರಳಿ ನೀರು ತರಬೇಕಾಗಿದೆ. ಗ್ರಾಪಂ ಪಿಡಿಒ ಅಥವಾ ಆಡಳಿತಾಧಿಕಾರಿ ಇತ್ತ ಗಮನ ಹರಿಸಿ ಜನರ ಸಮಸ್ಯೆ ಪರಿಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.