ಗಂಗಾವತಿ ಜವಾಹರ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಆಧಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ 33 ಸಾಮೂಹಿಕ ಪವಮಾನ ಹೋಮದ ಪೂರ್ಣಾಹುತಿ ಸಂಪನ್ನ ಜರುಗಿತು. ಪುರೋಹಿತರಾದ ಪ್ರದೀಪಾಚಾರ್, ಅನಿಲ ಭಟ್, ಪವನ್ ಕುಮಾರ್ ಜೋಶಿ ಇತರರಿದ್ದರು.
- ಆಧಿಕ ಮಾಸದ ವಿಶೇಷ ಪೂಜೆ
- ಒಂದು ತಿಂಗಳ ಪರ್ಯಂತ ಕಾರ್ಯಕ್ರಮ
ಗಂಗಾವತಿ: ನಗರದ ಜವಾಹರ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಭಾನುವಾರ ಆಧಿಕ ಮಾಸದ ನಿಮಿತ್ತ 33 ಸಾಮೂಹಿಕ ಪವಮಾನ ಹೋಮ ಸಂಪನ್ನ ಜರುಗಿತು.
ಮೇ 16ರಿಂದಲೇ ದೇವಾಲಯದಲ್ಲಿ ಜ್ಞಾನ ಸತ್ರ ಹಮ್ಮಿಕೊಂಡಿದ್ದು, ತಿಂಗಳ ಪರ್ಯಂತ ಮುಂದುವರಿಯಲಿದೆ. ಪವಮಾನ ಹೋಮ ಹಿನ್ನೆಲೆಯಲ್ಲಿ 33 ಕುಂಡಗಳನ್ನು ನಿರ್ಮಿಸಿದ್ದು, ಏಕಕಾಲಕ್ಕೆ ಹೋಮ ಮತ್ತು ಪೂರ್ಣಹುತಿ ನೆರವೇರಿಸಲಾಯಿತು. ಸಾಮೂಹಿಕ ಹೋಮ ಪೌರೋಹಿತ್ಯವಹಿಸಿದ್ದ ಚನ್ನಳ್ಳಿಯ ವೆಂಕಟೇಶಾಚಾರ್ ಮಾತನಾಡಿ, ಮಾಡಿದ ಕರ್ಮಗಳನ್ನು ತೊಳೆದುಕೊಳ್ಳಲು ಜ್ಞಾನಸತ್ರದಲ್ಲಿ ಪಾಲ್ಗೊಳ್ಳಬೇಕು. ಧಾರ್ಮಿಕ ಮತ್ತು ಆಧ್ಯಾತ್ಮ ಚಟುವಟಿಕೆಗಳು ನೆಮ್ಮದಿ ಬದುಕಿಗೆ ನಾಂದಿಯಾಗಲಿವೆ ಎಂದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ ಮಾತನಾಡಿ, 3 ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಜ್ಞಾನ ಸತ್ರ ಶ್ರೇಷ್ಟವಾಗಿದ್ದು, ಋತ್ವಿಜರ ತಂಡ 33 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಿದೆ ಎಂದು ತಿಳಿಸಿದರು. ಪುರೋಹಿತರಾದ ಪ್ರದೀಪಾಚಾರ್, ಅನಿಲ ಭಟ್, ಪವನ್ ಕುಮಾರ್ ಜೋಶಿ ಹೋಮ, ಪೂರ್ಣಾಹುತಿ ನೆರವೇರಿಸಿದರು.