ರಾಹುಲ್​ ರತ್ನಂ ಪಾಂಡೆಯ 
ಜಿಲ್ಲೆ

ವಿಮೆ ಯೋಜನೆ ಜನರಿಗೆ ತಲುಪಿಸಿ, ಸಿಇಒ ರಾಹುಲ್​ ರತ್ನಂ ಪಾಂಡೆಯ ಸಲಹೆ

ಕೊಪ್ಪಳ: ಜನರ ಸಾಮಾಜಿಕ ಭದ್ರತೆಗೆ ಇರುವ ಪಿಎಂ ಜೀವನ್​ ಜ್ಯೋತಿ ಬೀಮಾ ಹಾಗೂ ಪಿಎಂ ಸುರಾ ಬೀಮಾ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಸೂಚಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಎರಡೂ ಯೋಜನೆಗಳು ಜನರಿಗೆ ಉಪಯುಕ್ತ. ಲಾನುಭವಿ ಖಾತೆಯಿಂದ ಪ್ರತಿ ವರ್ಷ ಜೂನ್​ ತಿಂಗಳಲ್ಲಿ 456ರೂ. ಕಡಿತವಾಗಲಿದೆ. ಸಾವು ಅಥವಾ ಅಪಘಾತವಾದಲ್ಲಿ ಪರಿಹಾರ ದೊರೆಯಲಿದೆ. ಅರ್ಹರನ್ನು ನೋಂದಾಯಿಸಿ. ಆ.6 ಮತ್ತು 7ರಂದು ಎರಡು ದಿನ ಗ್ರಾಪಂ ಹಾಗೂ ನಗರ, ಸ್ಥಳಿಯ ಸಂಸ್ಥೆ ವ್ಯಾಪ್ತಿಯಲ್ಲಿ ಶಿಬಿರ ಹಮ್ಮಿಕೊಂಡು ಅರಿವು ಮೂಡಿಸಿ. ಲೀಡ್​ ಬ್ಯಾಂಕ್​ ಅಧಿಕಾರಿಗಳು ಗ್ರಾಪಂಗೆ ಒಂದರಂತೆ, ನಗರ, ಸ್ಥಳಿಯ ಸಂಸ್ಥೆಯಲ್ಲಿ ಎರಡು ಕಾರ್ಯಕ್ರಮ ಹಮ್ಮಿಕೊಂಡು ಅರ್ಹರನ್ನು ನೋಂದಾಯಿಸಿ. ಎಲ್ಲ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರು, ಹೊರಗುತ್ತಿಗೆ ಸಿಬ್ಬಂದಿ, ಅಡುಗೆದಾರರು, ಎಲ್ಲ ನೌಕರರನ್ನು ವಿಮೆಗೆ ಒಳಪಡಿಸುವಂತೆ ಸಲಹೆ ನೀಡಿದರು.

ಲೀಡ್​ ಬ್ಯಾಂಕ್​ ವ್ಯವಸ್ಥಾಪಕ ವೀರೇಂದ್ರ ಕುಮಾರ್​ ಕೆ. ಮಾತನಾಡಿ, ಪಿಎಂ ಜೀವನ ಜ್ಯೋತಿ ಬೀಮಾ ಯೋಜನೆಯಡಿ 18 ರಿಂದ 50 ವರ್ಷದೊಳಗಿನವರು ವಾರ್ಷಿಕ 436ರೂ. ಪಾವತಿಸಬೆಕು. ಮರಣ ಸಂಭವಿಸಿದರೆ, ಅವರ ಅವಲಂಬಿತರಿಗೆ 2 ಲಕ್ಷ ರೂ. ನೆರವು ಸಿಗಲಿದೆ. ಪಿಎಂ ಸುರಕ್ಷಾ ಬೀಮಾ ಯೋಜನೆಯಡಿ ವಾರ್ಷಿಕ 20 ರೂ. ಪಾವತಿಸಬೇಕು. ಅಪಘಾತವಾಗಿ ಮೃತರಾದೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ 2 ಲಕ್ಷ ರೂ. ಭಾಗಶ ವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ ಸಿಗಲಿದೆ. 18ರಿಂದ 70 ವರ್ಷದೊಳಗಿನವರು ಯೋಜನೆಗೆ ಅರ್ಹರು. ಬ್ಯಾಂಕಿನಲ್ಲಿ ನೋಂದಣಿ ಮಾಡಬಹುದು. ಜೀವನ ಜ್ಯೋತಿ ಬೀಮಾ ಯೋಜನೆಯಡಿ 1,21,814 ಹಾಗೂ ಸುರಕ್ಷಾ ಬೀಮಾ ಯೋಜನೆಯಡಿ 2,98,676 ಜನರು ನೋಂದಾಯಿಸಿದ್ದಾರೆಂದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ್​, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ ಅತ್ತಾರ್​, ಡಿಡಿಪಿಐ ಶ್ರೀಶೈಲ ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ, ಆರೋಗ್ಯ ಇಲಾಖೆ ನಾಗರಾಜ ಜುಮ್ಮನವರ ಇತರರಿದ್ದರು.