ಜಿಲ್ಲೆ

ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಕೊಡುಗೆ ಅಪಾರ

ಕೊಪ್ಪಳ: ಕಲೆ, ವಾಸ್ತು ಶಿಲ್ಪಕ್ಕೆ ವಿಶ್ವಕರ್ಮ ಅವರ ಕೊಡುಗೆ ಅಪಾರ ಎಂದು ಎಡಿಸಿ ಸಿದ್ರಾಮೇಶ್ವರ ಹೇಳಿದರು.

ಜಿಲ್ಲಾಡಳಿತದಿಂದ ಬುಧವಾರ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಸಮಾಜಕ್ಕೆ ದೈವಶಕ್ತಿ ಇದ್ದು ಸಕಲ ಕಲೆಗಳನ್ನು ಕರಗತ ಮಾಡಿಕೊಂಡಿದೆ. ಅವರು ನಿರ್ಮಿಸಿದ ಶಿಲ್ಪಕಲೆ ಶ್ರೀಮಂತಿಕೆಯಿಂದ ಕೂಡಿದೆ. ಸಮುದಾಯ ಅಭಿವೃದ್ಧಿಗೆ ನಿಗಮದಿಂದ ವಿವಿಧ ಸೌಲಭ್ಯಗಳನ್ನು ಜಾರಿ ಮಾಡಲಾಗಿದೆ. ಕರಕುಶಲ ವಸ್ತುಗಳು, ಕಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕೌಶಲ ಯೋಜನೆಯಡಿ ಸೌಲಭ್ಯ ಪಡೆಯಬಹಹುದು. ಕುಲಕಸುಬುದಾರರಿಗೆ ತರಬೇತಿ ಕಾರ್ಯಕ್ರಮ, ತರಬೇತಿ ಭತ್ಯೆ, ಸಾಲ ಮತ್ತು ಸಹಾಯಧನ ಸೌಲಭ್ಯಗಳಿದ್ದು, ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಜಿಲ್ಲಾ ವಿಶ್ವಕರ್ಮ ಸಮುದಾಯ ಅಧ್ಯಕ್ಷ ನಾಗೇಶ ಕುಮಾರ್​ ಮಾತನಾಡಿ, ವಿಶ್ವಕರ್ಮ ಸಮುದಾಯ ಜಗತ್ತಿಗೆ ಅದ್ಭುತ ಕಲೆ ನೀಡಿದೆ. ನಮ್ಮ ಕಲೆಗೆ ಸಹಕರಿಸಿ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ನಮ್ಮ ಕುಲಕಸುಬು ಮುಂದುವರಿಸಬೇಕು. ಸರ್ಕಾರ ವಿಶ್ವಕರ್ಮ ಜಯಂತಿ ಆಚರಿಸುತ್ತಿರುವುದು ಖುಷಿ ತಂದಿದೆ ಎಂದರು.

ವೀರಶೇಖರ ಬಿ. ಪತ್ತಾರ ಉಪನ್ಯಾಸ ನೀಡಿದರು. ಗೌರವ ಅಧ್ಯಕ್ಷ ಈಶಪ್ಪ ಬಡಿಗೇರ್​, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ತಾಲೂಕು ಅಧ್ಯಕ್ಷ ದೇವಪ್ಪ ಬಡಿಗೇರ, ಉಪಾಧ್ಯಕ್ಷ ಮಹಾದೇವಪ್ಪ ಕಮ್ಮಾರ, ರಾಮಣ್ಣ, ಸೂಗೂರೇಶ್ವರ, ಮಂಜುನಾಥ ಪಂಡಿತ, ದೇವೇಂದ್ರಪ್ಪ ಬಡಿಗೇರ್​, ಸಾವಿತ್ರಿ ಮುಜುಂದಾರ, ಚೈತ್ರಾ ಪತ್ತಾರ ಇತರರಿದ್ದರು.