ಜಿಲ್ಲೆ

ಗ್ರಾಮ ಆಡಳಿತಾಧಿರಿಗಳ ಕಾರ್ಯಭಾರ ಕಡಿತಗೊಳಿಸಿ

Kopala - Raveendra V K

ಕೊಪ್ಪಳ: ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂದ ತಾಲೂಕು ಪದಾಧಿಕಾರಿಗಳು ಗುರುವಾರ ನಗರದ ತಹಸೀಲ್​ ಕಚೇರಿ ಎದುರು ಅರ್ನಿದಿಷ್ಟಾವಧಿ ಧರಣಿ ನಡೆಸಿದರು.

ಕಂದಾಯ ಇಲಾಖೆಗೆ ಕಾರ್ಯಭಾರ ಹೆಚ್ಚಿದೆ. ಅದಕ್ಕೆ ತಕ್ಕಂತೆ ಸೌಲಭ್ಯಗಳಿಲ್ಲ. ಇಲಾಖೆ ಒದಗಿಸುವ ವಿವಿಧ 21 ತಂತ್ರಾಶ ದಾಖಲಿಸಲು ಸೂಕ್ತ ಸೌಲಭ್ಯ ಇಲ್ಲ. ಶಿಷ್ಟಾಚಾರ ಪಾಲನೆ ಕರ್ತವ್ಯ ಹೇರಲಾಗಿದೆ. ಹಕ್ಕು ಬದಲಾವಣೆ ಅವಧಿ ಕಡಿಮೆ ಇದ್ದು ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಗ್ರಾಮ ಸಹಾಯಕರಿಗೆ ಯಾವುದೇ ಸೇವಾ ಭದ್ರತೆ ಕಲ್ಪಿಸಿಲ್ಲವೆಂದು ದೂರಿದರು.

ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಮ್ಯೂಟೇಷನ್​ ಅವಧಿ ವಿಸ್ತರಿಸಬೇಕು. ಇಲಾಖೆ ಒದಗಿಸುವ ಸೇವೆ ದಾಖಲಿಸಲು ವ್ಯವಸ್ಥೆ ಕಲ್ಪಿಸಬೇಕು. ಶಿಷ್ಟಾಚಾರ ಕೆಲಸದಿಂದ ಗ್ರಾಮ ಆಡಳಿತಾಧಿಕಾರಿಗಳನ್ನು ಕೈ ಬಿಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿ, ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ರಾಜ್ಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಮುಷ್ಕರ ಆರಂಭಿಸಿದ್ದೇವೆ. ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದರು.

ಸಂದ ಜಿಲ್ಲಾಧ್ಯಕ್ಷ ಮಹ್ಮದ ಆಸೀಪ್​ ಅಲಿ, ಉಪಾಧ್ಯಕ್ಷ ಬಸವರಾಜ ಲಂಬಾಣಿ, ತಾಲೂಕು ಅಧ್ಯಕ್ಷ ಗಂಗಾಧರ ಹಳ್ಳಿ, ಕಂದಾಯ ಇಲಾಖೆ ನೌಕರರ ಸಂದ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ, ವಿಕಲಚೇತನ ನೌಕರರ ಸಂದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಇತರರಿದ್ದರು.