ಜಿಲ್ಲೆ

ಸ್ವಚ್ಛತಾ ಜಾಗೃತಿ ಜಾಥಾ

ಕೊಪ್ಪಳ: ಸ್ವಚ್ಛತೆಯೇ ಸೇವೆ ಅಭಿಯಾನ ಅಂಗವಾಗಿ ನಗರದ ಪ್ರಧಾನ ಅಂಚೆ ಕಚೇರಿ ಅಧಿಕಾರಿ, ಸಿಬ್ಬಂದಿ ಬುಧವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.

ಪ್ರಧಾನ ಅಂಚೆ ಕಚೇರಿಯಿಂದ ಆರಂಭವಾಗಿ ಅಶೋಕ ವೃತ್ತ, ಬಸ್​ ನಿಲ್ದಾಣ ಮಾರ್ಗವಾಗಿ ವಿಭಾಗೀಯ ಅಂಚೆ ಕಚೇರಿ ಮೂಲಕ ಪ್ರಧಾನ ಅಂಚೆ ಕಚೇರಿ ತಲುಪಿತು. ಸ್ವಚ್ಛತೆಯೇ ಸೇವೆ, ಸ್ವಚ್ಛತೆಯೇ ಆರೋಗ್ಯ , ಮನೆಗೊಂದು ಮರ ಊರಿಗೊಂದು ವನ, ಕಾಡು ಬೆಳೆಸಿ ನಾಡು ಉಳಿಸಿ , ಸ್ವಚ್ಛ ಭಾರತ ಶ್ರೇಷ್ಠ ಭಾರತ ಘೋಷಣೆಗಳೊಂದಿಗೆ ಜಾಥಾ ನಡೆಸಿದರು.

ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರಾದ ಎನ್​.ಜಿ.ಭಂಗೀಗೌಡರ್​, ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಪೋಸ್ಟ್​ ಮಾಸ್ಟರ್​ ನಾಗರಾಜ, ಡಿಪಿಎಂ ಸವೋರ್ತ್ತಮ ಉಪಾಧ್ಯಾಯ, ಡಿ.ಎಂ.ದ್ರಾಕ್ಷಿ , ಜಿ.ಎನ್​.ಹಳ್ಳಿ , ಸಕ್ರಪ್ಪ ಹೂಗಾರ, ಸುಭಾಷ, ಅಕೌಂಟೆಂಟ್​ ಅಶೋಕ, ಸಿಬ್ಬಂದಿ ಬಸವರಾಜ, ಕಿರಣ್​, ಪರವಿನ್​ ಬೇಗಂ, ರಿಹಾನಾ ಬೇಗಂ, ರಾಧಿಕಾ ಇತರರಿದ್ದರು.