ಜಿಲ್ಲೆ

ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದ ನ್ಯಾಯಾಧೀಶರು

Kopala - Raveendra V K

ಕೊಪ್ಪಳ: ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ನಗರದ ಜಿಲ್ಲಾ ನ್ಯಾಯಾಲಯ ಆವರಣ ಹಾಗೂ ಕೋಟೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ನ್ಯಾಯಾಲಯ ಆವರಣದಲ್ಲಿ ಸ್ವತ@ ಕಸಗೂಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಅಭಿಯಾನ ಸ್ವಚ್ಛತಾ ಹೀ ಸೇವೆ&2024ರಡಿ ಸ್ವಭಾವ ಸ್ವಚ್ಛತಾ -ಸಂಸ್ಕಾರ ಸ್ವಚ್ಛತಾ ಧೈಯ ವಾಕ್ಯದಡಿ ರಚನಾತ್ಮಕ ಚಟುವಟಿಕೆ ಆಯೋಜಿಸಲಾಗಿದೆ. ನಮ್ಮ ಸುತ್ತ ಮುತ್ತ ಸ್ವಚ್ಛ ವಾತಾವರಣ ನಿರ್ಮಿಸಬೇಕು. ಸುಂದರವಾಗಿಟ್ಟುಕೊಳ್ಳಲು ಶ್ರಮಿಸೋಣ. ಎಲ್ಲರೂ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿ ಎಂದರು.

ಸ್ವಚ್ಛತಾ ಕಾರ್ಯ ಬಳಿಕ ವಿವಿಧೆಡೆ ಗಿಡ ನೆಡಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್​. ದರಗದ ಇತರರಿದ್ದರು.