ಕೊಪ್ಪಳ ತಾಲೂಕಿನ ಮಾದಿನೂರಿನಲ್ಲಿ ಶ್ರೀ ವಿಷ್ಣುತೀರ್ಥ ಶ್ರೀಪಾದಂಗಳವರ ಉತ್ತರಾರಾಧನೆ ಪ್ರಯುಕ್ತ ರಥೋತ್ಸವ ಜರುಗಿತು.  
ಜಿಲ್ಲೆ

ಶ್ರೀ ವಿಷ್ಣುತೀರ್ಥರ ಆರಾಧನೆ ಸಂಪನ್ನ

ಕುರುವತ್ತಿ ಶ್ರೀಕಾಂತಪ್ಪ

ಕೊಪ್ಪಳ: ತಾಲೂಕಿನ ಮಾದಿನೂರಿನಲ್ಲಿ ಶ್ರೀ ವಿಷ್ಣುತೀರ್ಥ ಶ್ರೀಪಾದಂಗಳವರ 219ನೇ ಆರಾಧನಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು.

ಗ್ರಾಮದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಧಾರ್ಮಿಕ ಪ್ರವಚನ ಹಾಗೂ ನಾಡಿನ ಹಿರಿಯ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ನಡೆದವು.

ಉತ್ತರಾರಾಧನೆ ಪ್ರಯುಕ್ತ ರತೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ರಾಜ್ಯವಲ್ಲದೇ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು.