ಜಿಲ್ಲೆ

ಗದಗ: ನ.24 ರಿಂದ ಕೊಪ್ಪಳ ಶ್ರೀಗಳ ಪ್ರವಚನ

Gadag - Shivanand Hiremath

ಗದಗ: ಕೊಪ್ಪಳ ಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಪ್ರವಚನವನ್ನು ಗದಗ ನಗರದಲ್ಲಿ ನ.24 ರಿಂದ ಡಿ.03ರ ವರೆಗೆ ಆಯೋಜಿಸಲಾಗಿದೆ. ಈ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆಗಾಗಿ ಪೂರ್ವಭಾವಿ ಸಭೆಯನ್ನು ನ.9 ರಂದು ಸಂಜೆ 4 ಗಂಟೆಗೆ ಹುಲಕೋಟಿ ಸಹಕಾರ ಸಂಸ್ಥೆಯ ಗ್ರಂಥಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಜಿ ಶಾಸಕ ಡಿ. ಆರ್​. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.