ಜಿಲ್ಲೆ

ಅಧಿಕಾರೇತರ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

Kopala - Raveendra V K

ಕೊಪ್ಪಳ: ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ(ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಪುನರ್​ ರಚಿಸಲು ಅಧಿಕಾರೇತರ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ 5ಕ್ಕಿಂತ ಹೆಚ್ಚಿಲ್ಲದಂತೆ 3 ಪರಿಶಿಷ್ಟ ಜಾತಿ ಮತ್ತು 2 ಪರಿಶಿಷ್ಟ ಪಂಗಡದ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಇತರ ಪ್ರವರ್ಗಗಳಿಂದ 3 ಜನ ಅಧಿಕಾರೇತರ ಸದಸ್ಯರನ್ನು ನೇಮಿಸಬೇಕಿದೆ. ಎನ್​ಜಿಒಗಳ ಆಸಕ್ತ ಸದಸ್ಯರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಪಡೆದು ಅ.29ರೊಳಗೆ ಸಲ್ಲಿಸಿ. ಮಾಹಿತಿಗಾಗಿ ಇಲಾಖೆ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.