ಜಿಲ್ಲೆ

ನಿವೃತ್ತರಿಗೆ ಸೌಲಭ್ಯ ನೀಡಿ

Kopala - Raveendra V K

ಕೊಪ್ಪಳ: ಕಳೆದೆರೆಡು ವರ್ಷದಿಂದ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗ ಅನುಸಾರ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕರು ನಗರದ ಜಿಲ್ಲಾಡಳಿತ ಭವನ ಎದುರು ಕೈಗೆ ಕಪು$್ಪಪಟ್ಟಿ ಧರಿಸಿ ಧರಣಿ ನಡೆಸಿದರು.

2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ರಾಜ್ಯಾದ್ಯಂತ ಸಾವಿರಾರು ಸರ್ಕಾರಿ ನೌಕರರು ನಿವೃತ್ತರಾಗಿದ್ದಾರೆ. ಈ ಅವಧಿಗೆ ಅನ್ವಯ ಆಗುವಂತೆ 7ನೇ ವೇತನ ಆಯೋಗ ಜಾರಿಯಾಗಿದೆ. ಅದಕ್ಕೆ ಅನ್ವಯ ಆಗುವಂತೆ ನಿವೃತ್ತರಾದವರಿಗೆ ಸೌಲಭ್ಯ ನೀಡುತ್ತಿಲ್ಲ. ಇದರಿಂದ ಸಾವಿರಾರು ನೌಕರರಿಗೆ ಅನ್ಯಾಯವಾಗಲಿದೆ ಎಂದರು.

ಈ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರು, ಶಾಸಕರ ಮೂಲಕ ಮನವಿ ಸಲ್ಲಿಸಿದ್ದೇವೆ. ಸೆ.18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ ನಲ್ಲಿ ಬೃಹತ್​ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದ್ದೇವೆ. ಆದರೆ ಸರ್ಕಾರ ಕ್ರಮ ಕೈಗೊಂಡಿಲ್ಲ. ನಿವೃತ್ತಿ ಸೌಲಭ್ಯಗಳಾದ ಡಿಸಿಆರ್​ಜಿ, ಕಮುಟೇಷನ್​, ಗಳಿಕೆ ರಜೆ ನಗರೀಕರಣದ ಮೊತ್ತ ಸೇರಿ ಎಲ್ಲ ಸೌಲಭ್ಯಗಳು 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು. ಈ ಬಗ್ಗೆ ಸರಕಾರ ಕೂಡಲೇ ಪ್ರತ್ಯೇಕ ಆದೇಶ ಹೊರಡಿಸಬೇಕು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರಿಗೆ ಮನವಿ ಸಲ್ಲಿಸಿದರು. ವೇದಿಕೆ ರಾಜ್ಯ ಸಂಚಾಲಕ ಅಶೋಕ ಎಂ.ಸಜ್ಜನ, ಮುಖಂಡರಾದ ಎಂ.ಪಿ.ಎಂ.ಷಣ್ಮುಖಯ್ಯ, ವಾದಿರಾಜ ಇಟಗಿ, ಶರಣಯ್ಯ ಸಸಿಮಠ, ಅಹ್ಮದ್​ ಹುಸೇನ್​, ಶೇಖರಪ್ಪ, ರೇಣುಕಾ ಡಂಬಳ, ಪಿ.ಸಿದ್ದಮ್ಮ ಇತರರಿದ್ದರು.