ಜಿಲ್ಲೆ

ಆರ್.ಸಿ.ಬಿ ಸಮಾವೇಶಕ್ಕೆ ಕೊಪ್ಪಳ ಜಿಲ್ಲೆಯ ಹೆಚ್ಚುಜನ ಪಾಲ್ಗೊಳ್ಳಿ: ಕಾಂತೇಶ್

ಕೊಪ್ಪಳ: ಬಾಗಲಕೋಟೆಯಲ್ಲಿ ಅ. 20ರಂದು ರಾಯಣ್ಣ, ಚೆನ್ನಮ್ಮ ಬ್ರಿಗೇಡಿನ ಬೃಹತ್ ಪೂರ್ವಬಾವಿ ಸಭೆ ನಡೆಯಲಿದೆ. ಆ ಸಭೆಯಲ್ಲಿ 5ರಿಂದ 10 ಸಾವಿರ ಜನ ಸೇರಲಿದ್ದಾರೆ. 50ಕ್ಕೂ ಹೆಚ್ಚು ಸ್ವಾಮೀಜಿ ಭಾಗವಹಿಸಲಿದ್ದು, ಕೊಪ್ಪಳ ಜಿಲ್ಲೆಯಿ‌ಂದಲೂ ಬಹಳಷ್ಟು ಜನರು ಭಾಗವಹಿಸಬೇಕು ಎಂದು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮುಖಂಡ ಕಾಂತೇಶ್ ಈಶ್ವರಪ್ಪ ಹೇಳಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ಶುಕ್ರವಾರ ರಾಯಣ್ಣ ಚೆನ್ನಮ್ಮ ಬ್ರಿಗೇಡಿನ ಬಾಗಲಕೋಟೆಯ ಬೃಹತ್ ಸಮಾವೇಶ ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಜನಪ್ರತಿನಿಧಿಯಲ್ಲ, ಆದರೂ ಇಷ್ಟು ಜನ ಬಂದಿದ್ದೀರಿ. ಇದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯದಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. ಪಕ್ಕದಲ್ಲಿ ಇದ್ದುಕೊಂಡೇ ನನ್ನನ್ನು ರಾಜಕೀಯವಾಗಿ ತುಳಿದರು. ಹಾಗಾಗಿ ದಲಿತರು ಮತ್ತು ಹಿಂದುಳಿದವರಿಗಾಗಿ ಸಂಘಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶಾಸಕ ಅಥವಾ ಸಂಸದನಾಗತ್ತೇನೆ ಎಂದರು.

ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಉಪಾಧ್ಯಕ್ಷ ಕುಬೇರ ಮಜ್ಜಿಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ, ಮುಖಂಡರಾದ ಹನುಮಂತಪ್ಪ ಹನುಮಾಪುರ, ರವಿ ಪಾಟೀಲ್ ಸೇರಿದಂತೆ ಇತರರು ಇದ್ದರು.