ಜಿಲ್ಲೆ

ಜಿಲ್ಲಾ ಮಟ್ಟದ ಪಿಯು ಪಂದ್ಯಾವಳಿ ಮುಕ್ತಾಯ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಶುಕ್ರವಾರ ಮುಕ್ತಾಯವಾದವು.

ಮೊದಲ ದಿನ ಮಹಿಳಾ ಪಂದ್ಯಾವಳಿ ಜರುಗಿದರೆ, ಎರಡನೇ ದಿನ ಪುರುಷ ವಿಭಾಗದ ಕ್ರೀಡಾಕೂಟ ಜರುಗಿದವು. ಅಥ್ಲೆಟಿಕ್​ ವಿಭಾಗ, ಖೋಖೋ, ಕಬಡ್ಡಿ, ವಾಲಿಬಾಲ್​, ಥ್ರೋಬಾಲ್​ ನಡೆದವು. ಕಬಡ್ಡಿಯಲ್ಲಿ ವೈಟಿಆರ್​ ಪಿಯು ಕಾಲೇಜು ಗಂಗಾವತಿ (ಪ್ರಥಮ), ಕೆಪಿಎಸ್​ ಪಿಯು ಕಾಲೇಜು ಕಾರಟಗಿ (ದ್ವೀತಿಯ) ಸ್ಥಾನ ಪಡೆದವು. ಖೋಖೋದಲ್ಲಿ ಎಸ್​ಜಿ ಪಿಯು ಕಾಲೇಜು (ಪ್ರಥಮ), ಸ.ಪ.ಪಿಯು ಕಾಲೇಜು ಹನುಮಸಾಗರ(ದ್ವೀತಿಯ), ವಾಲಿಬಾಲ್​ನಲ್ಲಿ ವಿಎನ್​ಸಿ ಪಿಯು ಕಾಲೇಜು ಮುನಿರಾಬಾದ್​ (ಪ್ರಥಮ), ವಿದ್ಯಾನಂದ ಗುರುಕುಲ ಪಿಯು ಕಾಲೇಜು ಕುಕನೂರು (ದ್ವೀತಿಯ), ಥ್ರೋ ಬಾಲ್​ನಲ್ಲಿ ವಿದ್ಯಾನಿಕೇತನ ಪಿಯು ಕಾಲೇಜು ಶ್ರೀರಾಮ ನಗರ (ಪ್ರಥಮ), ಎಸ್​ಎಸ್​ವಿ ಪಿಯು ಕಾಲೇಜು ತಾವರಗೇರಾ (ದ್ವೀತಿಯ) ಸ್ಥಾನ ಪಡೆದವು.

ಖೋಖೋ ಅಂತಿಮ ಪಂದ್ಯ ವೇಳೆ ಹೊರಗಿನ ವ್ಯಕ್ತಿನ್ನು ಆಟವಾಡಿಸಿದ್ದಾರೆಂಬ ವಿಷಯಕ್ಕೆ ಗೊಂದಲ ಉಂಟಾಯಿತು. ಎಸ್​ಜಿ ಕಾಲೇಜು ಹಾಗೂ ಹನುಸಾಗರ ಕಾಲೇಜು ಪಂದ್ಯ ವೇಳೆ ಕೆಲ ಕಾಲ ಆಟ ಸ್ಥಗಿತವಾಗಿಯಿತು. ಹೊಸದಾಗಿ ಪಂದ್ಯ ಆಡಿಸುವಂತೆ ಬೇಡಿಕೆ ಇಟ್ಟರು. ಬಳಿಕ ನಿರ್ಣಾಯಕರು ಗೊಂದಲ ತಿಳಿಮಾಡಿದರು.