ಜಿಲ್ಲೆ

ಕೆಪಿಎಸ್​ಎಯಿಂದ ಶಿಕ್ಷಕರ ದಿನಾಚರಣೆ 14ರಂದು

Kopala - Raveendra V K

ಕೊಪ್ಪಳ: ಕೊಪ್ಪಳ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದಿಂದ ಸೆ.14ರಂದು ಕೊಪ್ಪಳದ ಮಧುಶ್ರೀ ಗಾರ್ಡನ್​ನಲ್ಲಿ ಬೆಳಗ್ಗೆ 10.30ಕ್ಕೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಶಿವಕುಮಾರ ಕುಕನೂರು ತಿಳಿಸಿದರು.

ಕಳೆದ ವರ್ಷ ಕುಸ್ಮಾ ಮತ್ತು ಕ್ಯಾಮ್ಸ್​ ಹೆಸರಿನಲ್ಲಿ ಎರಡು ಸಂಟನೆ ಇದ್ದವು. ಆದರೆ, ಹಿರಿಯರ ಮಾರ್ಗದರ್ಶನದಂತೆ ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟವೆಂದು 2023ರ ಸೆಪ್ಟಂಬರ್​ 17ರಂದು ಎರಡೂ ಸಂ ಒಟ್ಟುಗೂಡಿಸಿದ್ದೇವೆ. ಆದರೆ, ಕುಸ್ಮಾ ಸಂಕ್ಕೆ ಆಗ ಅಧ್ಯಕ್ಷರಾಗಿದ್ದ ಶಾಹಿದ ಎಂಬುವರು ಈಗಲೂ ತಾವೇ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅಧಿಕೃತವಾಗಿ ನಾವು ಬಸವರಾಜ ತಳಕಲ್​ ಅಧ್ಯಕ್ಷ, ನಿತೀಶ್​ ಪುಲಸ್ಕರ್​ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊಪ್ಪಳ ತಾಲೂಕಿನಲ್ಲಿ 100 ಖಾಸಗಿ ಶಾಲೆಗಳಿವೆ. 60ಕ್ಕೂ ಹೆಚ್ಚು ಆಡಳಿತ ಮಂಡಳಿಗಳು ನಮ್ಮ ಸಂಟನೆಯೊಂದಿಗೆ ಗುರುತಿಸಿಕೊಂಡಿವೆ. ಕುಸ್ಮಾ ಸದ್ಯ ಅಧಿಕೃತ ಸಂವಲ್ಲ. ಕೆಲವರು ಕೆಲ ಶಾಲೆಗಳಿಗೆ ತೆರಳಿ ಶಿಕ್ಷಕರ ದಿನಾಚರಣೆಗೆ ಹಣ ಕೇಳುತ್ತಿರುವುದು ಗಮನಕ್ಕೆ ಬಂದಿದೆ. ನಾವು ನಮ್ಮ ಸಂದಿಂದ ಯಾವುದೇ ಹಣ ಪಡೆಯುವುದಿಲ್ಲ. ಖಾಸಗಿ ಶಾಲೆಗಳ ಒಕ್ಕೂಟ ಎಂದು ಯಾರಾದರೂ ಶಾಲೆಗಳಿಗೆ ಬಂದರೆ ಸ್ಪಂದಿಸಬಾರದು ಎಂದು ಹೇಳಿದರು.

ಒಕ್ಕೂಟದ ಪದಾಧಿಕಾರಿಗಳಾದ ಬಸವರಾಜ ತಳಕಲ್​, ನಿತೀಶ ಪುಲಸ್ಕರ್​, ಆರ್​.ಎಚ್​.ಅತ್ತನೂರ, ಹುಲುಗಪ್ಪ ಕಟ್ಟಿಮನಿ, ಕೃಷ್ಣ ಕಬ್ಬೇರ ಇತರರಿದ್ದರು.