ಜಿಲ್ಲೆ

ಸಿಎಂ ಕಪ್​ ನೆಟ್​ಬಾಲ್​ ನಲ್ಲಿ ಕಲಬುರಗಿಗೆ ಕಂಚು

Kopala - Raveendra V K

ಕೊಪ್ಪಳ: ನಗರದ ಶ್ರೀ ಚೈತನ್ಯ ಸಂಸ್ಥೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಐದು ಜನ ಬಾಲಕಿಯರ ಒಳಗೊಂಡ ಕಲಬುರಗಿ ಮಹಿಳಾ ನೆಟ್​ ಬಾಲ್​ ತಂಡ ದಸರಾ ರಾಜ್ಯಮಟ್ಟದ ಸಿಎಂ ಕಪ್​ ನೆಟ್​ಬಾಲ್​ ಪಂದ್ಯದಲ್ಲಿ ಮೊದಲ ಬಾರಿ ತೃತೀಯ ಸ್ಥಾನ (ಕಂಚು) ಪಡೆದಿದೆ.

ಮೊದಲ ಬಾರಿಗೆ ಇಂತಹ ಸಾಧನೆ ಮಾಡಿದ ತಂಡದ ಸಾರಥ್ಯವನ್ನು ಸಾಹಿತ್ಯ ಎಂ. ಗೊಂಡಬಾಳ ವಹಿಸಿದ್ದರು. ಅಮರೇಶ ಕೋಚ್​ ಆಗಿದ್ದರೆ ನೆಟ್​ಬಾಲ್​ ಸಂಸ್ಥೆ ಕಾರ್ಯಾಧ್ಯಕ್ಷ ಮಂಜುನಾಥ ಗೊಂಡಬಾಳ ಮ್ಯಾನೇಜರ್​ ಆಗಿ ತಂಡ ಮುನ್ನಡೆಸಿದರು. ಕೊಪ್ಪಳದ ಸಾಹಿತ್ಯ ಗೊಂಡಬಾಳ, ಗ್ರೀಷ್ಮಾ ಜಿ. ಎಂ., ಅಕ್ಷಯಾ ಜಿ., ಬಿಬಿ ಬತುರ್​ ಅಫ್ಶೀನ್​, ಶ್ರೀಯಾ ಎಸ್​. ಕರ್ಣಂ, ಹೊಸಪೇಟೆ ಜಿಲ್ಲೆಯ ಸೃಷ್ಟಿ ಬಿ.ಜಿ., ಫ್ಲೇವಿ ಜಿ., ಮನ್ವಿತಾ ಮಸ್ತಿ, ಅನಘ ಎಂ., ಬಿ. ಲಕ್ಷಿ$್ಮ, ತಾನ್ವಿ ವಿ.ಎಚ್​., ಕಾಮಿನೇನಿ ಕಾರುಣ್ಯ ತಂಡದಲ್ಲಿ ಭಾಗವಹಿಸಿದ್ದರು.