ಜಿಲ್ಲೆ

ಜಿಲ್ಲಾ ಅಮೇಚುರ್​ ನೆಟ್​ಬಾಲ್​ ಸೋಸಿಯೇಷ್​ನಗೆ ಆಯ್ಕೆ

ಕೊಪ್ಪಳ: ಕರ್ನಾಟಕ ಅಮೇಚುರ್​ ನೆಟ್​ಬಾಲ್​ ಅಸೋಷಿಯೇಷನ್​ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಅಶ್ಫಕ್​ ಅಹ್ಮದ್​ ಮತ್ತು ಪ್ರಧಾನ ಕಾರ್ಯದರ್ಶಿ ಗಿರೀಶ್​ ಸಿ. ತಿಳಿಸಿದ್ದಾರೆ.

ನೆಟ್​ಬಾಲ್​ ಫೆಡರೇಶನ್​ ಆಫ್​ ಇಂಡಿಯಾ ಮತ್ತು ಕರ್ನಾಟಕ ಒಲಿಂಪಿಕ್​ ಅಸೋಷಿಯೇಷನ್​ ಸಂಯೋಜನೆ ಹೊಂದಿರುವ ರಾಜ್ಯಮಟ್ಟದ ಸಂಸ್ಥೆಯನ್ನು ಜಿಲ್ಲೆಯಲ್ಲಿ ಬೆಳೆಸಲು, ಕ್ರೀಡೆಯಲ್ಲಿ ಸಾಧನೆ ಮಾಡಲು ನೂತನ ಸಮಿತಿ ನೇಮಿಸಿದೆ. ಜಿಲ್ಲಾ ಅಧ್ಯಕ್ಷರನ್ನಾಗಿ ಅಬ್ದುಲ್​ ರಜಾಕ್​ ಟೇಲರ್​ ಹನುಮಸಾಗರ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಉಪಾಧ್ಯಕ್ಷರಾಗಿ ಮೌನೇಶ ವಡ್ಡಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್​ ಹಂಚಿನಾಳ ಗಂಗಾವತಿ ಅವರನ್ನು ಆಯ್ಕೆ ಮಾಡಲಾಗಿದ್ದು ಉಳಿದ ಪದಾಧಿಕಾರಿಗಳನ್ನು ನೂತನ ಸಮಿತಿ ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಮೊದಲ ಸೀನಿಯರ್​ ಸ್ಟೇಟ್​ ಮಿಕ್ಸೆಡ್​ ನೆಟ್​ಬಾಲ್​ ಚಾಂಪಿಯನ್​ಶಿಪ್​ ಅನ್ನು ಸೆಪ್ಟೆಂಬರ್​ 22 ರಂದು ಬೆಂಗಳೂರಿನ ಗ್ಲೋಬಲ್​ ಅಕಾಡಮಿ ಆಫ್​ ಟೆಕ್ನಾಲಜಿ ಸ್ಟೇಡಿಯಂನಲ್ಲಿ ನಡೆಸಲಿದೆ, ರಾಜ್ಯದ ಅನೇಕ ಜಿಲ್ಲೆಯ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಜಿಲ್ಲೆಯ ಆರು ಜನ ಮಹಿಳೆಯರು ಮತ್ತು ಆರು ಜನ ಪುರುಷರ ತಂಡ ಇದರಲ್ಲಿ ಭಾಗವಹಿಸಲಿದೆ.

ಏಷಿಯನ್​, ಓಲಂಪಿಕ್​, ಸ್ಕೂಲ್​ ಗೇಮ್​, ದಸರಾದಲ್ಲಿ ಇರುವ ನೆಟ್​ಬಾಲ್​ ಅನ್ನು ಜಿಲ್ಲೆಯಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ, ಅದಕ್ಕಾಗಿ ಮಹಿಳೆ ಮತ್ತು ಪುರುಷರ ತಂಡಗಳನ್ನು ಕಟ್ಟಿ ತರಬೇತುಗೊಳಿಸಲಾಗುವದು. ನೂತನ ಸಮಿತಿಯ ಪದಗ್ರಹಣ ಮತ್ತು ನೆಟ್​ಬಾಲ್​ ಪುರುಷ ಮತ್ತು ಮಹಿಳೆಯರ ಆಹ್ವಾನಿತ ಕಪ್​ ಸ್ಪರ್ಧೆ ಶೀಘ್ರ ಏರ್ಪಡಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.